ಕೋವಿಡ್-19: ಭಾರತದಲ್ಲಿ 1 ಕೋಟಿ ದಾಟಿದ ಒಟ್ಟು ಸೋಂಕಿತರ ಸಂಖ್ಯೆ| 95 ಲಕ್ಷಕ್ಕೂ ಅಧಿಕ ಗುಣಮುಖ

0
140
Tap to know MORE!

ನವದೆಹಲಿ ಡಿ.19: ದೇಶದಲ್ಲಿ ಹೊಸದಾಗಿ ದಾಖಲಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ, ಕಡಿಮೆಯಾಗುತ್ತಿರುವಾಗಲೂ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ. ಈ ಮೂಲಕ ಒಂದು ಕೋಟಿ ಜನರಲ್ಲಿ ಸೋಂಕು ದೃಢಪಟ್ಟ ಎರಡನೇ ರಾಷ್ಟ್ರವೆಂದೆನಿಸಿಕೊಂಡಿದೆ.

ಭಾರತದಲ್ಲಿ ಹೊಸ ಪ್ರಕರಣಗಳು 9 ಕೋಟಿಯಿಂದ 10 ಕೋಟಿಗೆ ಏರಲು 29 ದಿನಗಳನ್ನು ತೆಗೆದುಕೊಂಡಿತು. ಸೆಪ್ಟೆಂಬರ್ 15 ರಂದು ಐದು ಕೋಟಿ ದಾಟಿದಾಗಿನಿಂದ ಭಾರತದ ಕೋವಿಡ್ ಸಂಖ್ಯೆಗಳು ಕುಸಿಯುತ್ತಿವೆ.

ಇದನ್ನೂ ಓದಿ: “ಕೋವ್ಯಾಕ್ಸಿನ್” ಪಡೆದ ಸಚಿವರಿಗೆ ಕೊರೋನಾ – ಏನಂತಾರೆ ಲಸಿಕೆ ತಯಾರಕರು?

ಡಿ.18ರ ಶುಕ್ರವಾರ 26,991 ಹೊಸ ಸೋಂಕಿತರ ವರದಿಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,00,04,825 ಕ್ಕೆ ತಲುಪಿದೆ. ಅಮೇರಿಕಾದಲ್ಲಿ ಇದುವರೆಗೆ 1.7 ಕೋಟಿ ಸೋಂಕಿತರ ವರದಿಯಾಗಿದೆ ಮತ್ತು ಬ್ರೆಜಿಲ್‌ನಲ್ಲಿ 71 ಲಕ್ಷಕ್ಕೂ ಹೆಚ್ಚಿನ ಸೋಂಕಿತರೊಂದಿಗೆ ಮೂರನೇ ಸ್ಥಾನದಲ್ಲಿದೆ. ಕಳೆದ ಕೆಲವು ದಿನಗಳಿಂದ ಈ ಎರಡೂ ದೇಶಗಳು ಭಾರತಕ್ಕಿಂತ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳು ಮತ್ತು ಸಾವುಗಳನ್ನು ದಾಖಲಿಸಿವೆ.

ಭಾರತದ ಕೊರೋನಾ ಸೋಂಕಿತರ ಸಂಪೂರ್ಣ ಅಂಕಿ ಅಂಶಗಳು : covid19india.org

ಭಾರತದಲ್ಲಿ ಪ್ರತಿ 10 ಲಕ್ಷಕ್ಕೆ 104 ಸಾವುಗಳು ಸಂಭವಿಸಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಸೋಂಕಿತರಿರುವ 20 ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಒಟ್ಟು ಸೋಂಕಿತರ ಪೈಕಿ, ಪ್ರಸ್ತುತ 20 ನೇ ಸ್ಥಾನದಲ್ಲಿರುವ ಇಂಡೋನೇಷ್ಯಾ ಮಾತ್ರ ಪ್ರತಿ 10 ಲಕ್ಷಕ್ಕೆ ಭಾರತಕ್ಕಿಂತಲೂ ಕಡಿಮೆ (71) ಪ್ರಮಾಣದ ಸಾವುಗಳು ದಾಖಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಗ್ರಾಪಂ ಚುನಾವಣೆ : ಪತಿ ವಿರುದ್ಧ ಕಣಕ್ಕಿಳಿದ ಪತ್ನಿ| ಯೋಚಿಸಿಯೇ ನಿರ್ಧಾರ ಎಂದ ದಂಪತಿ!

LEAVE A REPLY

Please enter your comment!
Please enter your name here