ಕೋವಿಡ್-19: ದಕ್ಷಿಣ ಕನ್ನಡದಲ್ಲಿ ಶತಕ, ಉಡುಪಿ ಅರ್ಧಶತಕ!

0
195
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರತಿದಿನ 100ಕ್ಕೂ ಅಧಿಕ ಸೋಂಕಿತರ ವರದಿಯಾಗುತ್ತಿದ್ದು, ಇಂದು 131 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದೆ.

ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇದುವರೆಗೆ ಒಟ್ಟು 24,950 ಮಾದರಿಗಳನ್ನು ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಅವುಗಳ ಪೈಕಿ, 2,361 ಮಂದಿಯಲ್ಲಿ ಸೋಂಕು ದೃಢವಾಗಿದೆ. ಈ ಪೈಕಿ 1,467 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ ಮತ್ತು 844 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಬಿಡುಗಡೆಯಾಗಿದ್ದಾರೆ ಮತ್ತು ಇಂದಿನ ನಾಲ್ಕು ಮಂದಿ ಸೇರಿದಂತೆ ಒಟ್ಟು 50 ಸೋಂಕಿತರು ಸಾವನ್ನಪ್ಪಿದ್ದಾರೆ.

ಇಂದಿನ ವರದಿಯಲ್ಲಿ, 37 ಸೋಂಕಿತರು ಇತರರ ಸಂಪರ್ಕದೊಂದಿಗೆ ಕೊರೋನಾ ಸೋಂಕನ್ನು ತಗುಲಿಸಿಕೊಂಡಿದ್ದಾರೆ. ಅದಲ್ಲದೆ ಇಂದಿನ 32 ಸೋಂಕಿತರ ಸಂಪರ್ಕದ ಮೂಲವೇ ತಿಳಿಯದೇ ಇರುವುದು ಜನತೆಗೆ ಮತ್ತಷ್ಟು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

ವೆನ್ಲಾಕ್ ಮತ್ತು ಖಾಸಗಿ ಆಸ್ಪತ್ರೆಗಳಿಂದ ಸೋಮವಾರ 62 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ.

ಸೋಮವಾರ ಬೆಳಕಿಗೆ ಬಂದ 131 ಸೋಂಕಿತರಲ್ಲಿ, 16 ಪ್ರಾಥಮಿಕ ಸಂಪರ್ಕಗಳು, 63 ಮಂದಿ ಐಎಲ್ಐ ರೋಗಲಕ್ಷಣಗಳನ್ನು ಹೊಂದಿದ್ದರೆ, 10 ಮಂದಿ ಸಾರಿ ಲಕ್ಷಣಗಳನ್ನು ಹೊಂದಿದ್ದಾರೆ. ನಾಲ್ವರು ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವನ್ನು ಹೊಂದಿದ್ದರೆ, 38 ಸೋಂಕಿತರು ಇತರರ ಸಂಪರ್ಕದ ಮೂಲಕ ಸೋಂಕಿಗೆ ಒಳಪಟ್ಟಿರುತ್ತಾರೆ.

ಉಡುಪಿಯಲ್ಲಿಂದು ಅರ್ಧಶತಕ ಹೊಡೆದ ಕೊರೋನಾ!

ಇಂದು ಜಿಲ್ಲೆಯಲ್ಲಿ 53 ಸೋಂಕಿತರ ವರದಿಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 378ಕ್ಕೆ ಏರಿದೆ. ಐಸೋಲೇಶನ್ ವಾರ್ಡ್ ನಲ್ಲಿ 34 ಮಂದಿ ಇದ್ದು, ನಾಲ್ವರು ಕರೋನವೈರಸ್ ಶಂಕಿತರು, 10 ಮಂದಿ SARI ರೋಗ ಲಕ್ಷಣದವರು ಮತ್ತು 20 ಇತರ ಸೋಂಕಿತರ ಸಂಪರ್ಕಕ್ಕೆ ಬಂದವರಾಗಿರುತ್ತಾರೆ.

ಇಂದು 26 ಸೇರಿದಂತೆ 1,160 ಜನರನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ.

ಉಡುಪಿ ಜಿಲ್ಲಾಡಳಿತ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 4,875 ಜನರು 28 ದಿನಗಳ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಒಟ್ಟು 4,875 ಜನರು 14 ದಿನಗಳ ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 1,401 ಜನರು ಕ್ವಾರಂಟೈನ್ ನಲ್ಲಿದ್ದಾರೆ.

LEAVE A REPLY

Please enter your comment!
Please enter your name here