ಕೋವಿಸೆಲ್ಫ್ ಕಿಟ್ ಗೆ ಅನುಮೋದನೆ ನೀಡಿದ ICMR | ಇನ್ನು ಮನೆಯಲ್ಲೇ ಮಾಡಬಹುದು ಕೋವಿಡ್ ಟೆಸ್ಟ್!

0
154
Tap to know MORE!

ಹೊಸದಿಲ್ಲಿ: ಮನೆಯಲ್ಲಿಯೇ ಮಾಡಬಹುದಾದ ಕೊರೊನಾ ರ್ಯಾಾಪಿಡ್ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಸಮ್ಮತಿ ನೀಡಿದೆ. ಶೀಘ್ರವೇ ಮುಕ್ತ ಮಾರುಕಟ್ಟೆಯಲ್ಲಿ ಈ ಕಿಟ್‌ಗಳು ಲಭ್ಯ ಆಗಲಿವೆ. ”ಸೋಂಕು ಲಕ್ಷಣ ಉಳ್ಳ ವ್ಯಕ್ತಿಗಳಿಗೆ ಮಾತ್ರ ಈ ಕಿಟ್‌ ಬಳಸಿ ಹೋಮ್‌ ಟೆಸ್ಟ್‌ ಮಾಡಲು ಅನುಮತಿ ನೀಡಲಾಗಿದೆ. ಪಾಸಿಟಿವ್‌ ಪತ್ತೆಯಾದ ಬಳಿಕ ಅಂಥವರು ದೃಢೀಕರಣಕ್ಕಾಗಿ ಪ್ರಯೋಗಾಲಯವನ್ನು ಸಂಪರ್ಕಿಸಬೇಕು,” ಎಂದು ಸಲಹೆ ಮಾಡಲಾಗಿದೆ.

DRDO ಅಭಿವೃದ್ಧಿಪಡಿಸಿದ 2DG ಆ್ಯಂಟಿ ಕೋವಿಡ್ ಔಷಧಿ ಲೋಕಾರ್ಪಣೆ

ಕೊವಿಸೆಲ್ಫ್ ಎಂಬ ಹೆಸರಿನ ಟೆಸ್ಟ್‌ ಕಿಟ್‌ಗೆ ಐಸಿಎಂಆರ್‌ ಅನುಮತಿ ನೀಡಿದ್ದು ಇದರ ವಿಧಾನದ ಮೂಲಕ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ತಮಗೆ ತಾವೇ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. 2 ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಹಿರಿಯರ ಸಹಾಯದಿಂದ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.ಈ ಕಿಟ್ ಲಭ್ಯವಿದೆ ಎಂದು ಎಲ್ಲರೂ ಬೇಕಾಬಿಟ್ಟಿ ಈ ವಿಧಾನ ಬಳಸುವಂತಿಲ್ಲ. ಬದಲಾಗಿ, ಯಾರಲ್ಲಿ ಕೊರೊನಾ ಲಕ್ಷಣ ಇದೆ ಮತ್ತು ಯಾರು ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆಯೋ ಅಂಥವರು ಈ ವಿಧಾನದ ಮೂಲಕ ಕೊರೊನಾ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೊವಿಸೆಲ್ಫ್ ಕಿಟ್ನ್ನು ಬಳಸುವುದು ಹೇಗೆ?

ಕೊವಿಸೆಲ್ಫ್ ಕಿಟ್ನೊಂದಿಗೆ ಅದರ ಮೂಲಕ ಕೊರೊನಾ ಪರೀಕ್ಷೆ ನಡೆಸುವ ವಿಧಾನದ ವಿವರಣೆ ಇರುವ ಮ್ಯಾನುವಲ್ ಕೂಡ ಲಭ್ಯವಿರಲಿದೆ. ಹೆಚ್ಚುವರಿಯಾಗಿ ಐಸಿಎಮ್ಆರ್, ಪರೀಕ್ಷೆ ನಡೆಸಬೇಕಾದ ವಿಧಾನದ ಹಂತವನ್ನು ವಿಡಿಯೋ ಮೂಲಕವೂ ವಿವರಿಸಿದೆ.ಈ ಕಿಟ್ನಲ್ಲಿ ಮೂಗಿನ ದ್ರವ ಸಂಗ್ರಹಿಸುವ ಉಪಕರಣ, ಎಕ್ಸ್ಟ್ರಾಕ್ಷನ್ ಟ್ಯೂಬ್ ಮತ್ತು ಒಂದು ಟೆಸ್ಟ್ ಕಾರ್ಡ್ ಹೊಂದಿರುವ ಪೌಚ್ ಇರಲಿದೆ. ಕೊವಿಸೆಲ್ಫ್ ಮೂಲಕ ಪರೀಕ್ಷೆ ನಡೆಸಲು, ಬಳಕೆದಾರರು ಮೈಲ್ಯಾಬ್ (mylab) ಅಪ್ಲಿಕೇಷನ್ನ್ನು ತಮ್ಮ ಮೊಬೈಲ್ನಲ್ಲಿ ಹೊಂದಿರಬೇಕಿದೆ. ಮೂಗಿನ ದ್ರವ ಪಡೆದು ಟ್ಯೂಬ್ಗೆ ಅದನ್ನು ಹಾಕಬೇಕು. ಟ್ಯೂಬ್ನಲ್ಲಿ ಮೂಗಿನ ದ್ರವ ಇಳಿದುಕೊಳ್ಳುವಂತೆ ನೋಡಿಕೊಳ್ಳಬೇಕು.

LEAVE A REPLY

Please enter your comment!
Please enter your name here