ಕೋವ್ಯಾಕ್ಸಿನ್: ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ | 2021ರ ಫೆಬ್ರವರಿಗೆ ಲಭ್ಯ?

0
127
Tap to know MORE!

ದೇಶದಲ್ಲಿ ಜನರು ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಅಭಿವೃದ್ದಿಪಡಿಸಿದ ಕೊರೊನಾ ಲಸಿಕೆಯು ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ.

ಮೂರನೇ ಹಂತದ ಪ್ರಯೋಗದಲ್ಲಿ 26,000 ಸ್ವಯಂ ಸೇವಕರು ನೊಂದಣಿ ಮಾಡಿಕೊಂಡಿದ್ದಾರೆ. ಈ ಲಸಿಕೆಯನ್ನು ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜಂಟಿಯಾಗಿ ತಯಾರಿಸಿದೆ.

ಇದನ್ನೂ ಓದಿ: ಇನ್ನು ಮುಂದೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್, ಸುದ್ದಿ ಪ್ರಸಾರದ ವೆಬ್ಸೈಟ್‌ಗಳು..!

ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆ ಯಶಸ್ವಿಯಾಗಿ ಪರಿಣಾಮಕಾರಿಯಾದಲ್ಲಿ ತಕ್ಷಣ ಅದರ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತದೆ. ಈ ಮೂಲಕ ಶೀಘ್ರದಲ್ಲೇ ಸರ್ಕಾರ ನಿರ್ದೇಶಿಸಿದಂತೆ ಮೊದಲು ಆರೋಗ್ಯ ಕಾರ್ಯಕರ್ತರು, ವಯೋವೃದ್ಧರು ಮತ್ತು ಉಳಿದ ನಾಗರಿಕರಿಗೆ ನೀಡಲಾಗುವುದು.

ಪ್ರತಿ ಹಂತದ ಪ್ರಯೋಗಗಳು ಯಶಸ್ವಿಯಾದರೆ ಮುಂದಿನ‌ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತ್ ಬಯೋಟೆಕ್ ನಿರ್ಮಿಸಿದ ಕೋವ್ಯಾಕ್ಸಿನ್ ಭಾರತದಲ್ಲಿ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here