“ಕೋವ್ಯಾಕ್ಸಿನ್” ಪಡೆದ ಸಚಿವರಿಗೆ ಕೊರೋನಾ – ಏನಂತಾರೆ ಲಸಿಕೆ ತಯಾರಕರು?

0
232
Tap to know MORE!

ನವದೆಹಲಿ: ಕಳೆದ ತಿಂಗಳು ಕೋವ್ಯಾಕ್ಸಿನ್​ ಲಸಿಕೆ ಚುಚ್ಚಿಸಿಕೊಂಡಿದ್ದ ಹೊರತಾಗಿಯೂ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿರೋ ಭಾರತ್​ ಬಯೋಟೆಕ್​ ಸಂಸ್ಥೆ ಈ ಕುರಿತು ಸ್ಪಷ್ಟನೆ ನೀಡಿದೆ.

ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷಾರ್ಥ ಪ್ರಯೋಗ, 28 ದಿನಗಳ ಅಂತರದಲ್ಲಿ ನೀಡಲಾಗುವ ಎರಡು ಡೋಸ್​​​ಗಳ ಶೆಡ್ಯೂಲ್ ಆಧರಿಸಿದ್ದಾಗಿದೆ. ವ್ಯಕ್ತಿಗೆ ಎರಡನೇ ಡೋಸ್​ ನೀಡಿದ 14 ದಿನಗಳ ಬಳಿಕ, ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಅನ್ನೋದನ್ನ ನಿರ್ಧರಿಸಲಾಗುತ್ತದೆ. ವಾಲಂಟಿಯರ್​ಗಳು ಎರಡೂ ಡೋಸ್​​ ಪಡೆದ ನಂತರವಷ್ಟೇ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಕನ್ನಡದಲ್ಲಿ ಬೋಧನೆ ಮಾಡುತ್ತಿದ್ದ ಶಿಕ್ಷಕನಿಗೆ ಅಂತರರಾಷ್ಟ್ರೀಯ ಪ್ರಶಸ್ತಿ!

ಕಳೆದ ನವೆಂಬರ್​ 20ರಂದು ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗ ಆರಂಭವಾದ ದಿನ ಸಚಿವ ಅನಿಲ್​ ವಿಜ್ ತಾವೇ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಈ ಮೂಲಕ ಮೂರನೇ ಹಂತದ ಕ್ಲೀನಿಕಲ್ ಟ್ರಯಲ್​ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೊದಲ ವಾಲಂಟಿಯರ್​ ಆಗಿದ್ದರು. 28 ದಿನಗಳ ನಂತರ ಅವರಿಗೆ ಎರಡನೇ ಡೋಸ್​ ನೀಡಬೇಕಿತ್ತು. ಆದ್ರೆ ಅದಕ್ಕೂ ಮೊದಲೇ ಇಂದು ಅವರು ಟ್ವೀಟ್​ ಮಾಡಿ, ತಮಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿರುವುದಾಗಿ ತಿಳಿಸಿದ್ದಾರೆ. ಸದ್ಯ ಅವರು ಅಂಬಾಲಾ ಕ್ಯಾಂಟ್​​ ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ

LEAVE A REPLY

Please enter your comment!
Please enter your name here