ಮಂಗಳೂರಿನ 158 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ

0
191
Tap to know MORE!

ಮಂಗಳೂರು: ಕರ್ನಾಟಕದಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪಿಸುವ ಭಾರತೀಯ ಕೋಸ್ಟ್ ಗಾರ್ಡ್‌ನ ದೀರ್ಘಕಾಲದ ಮಹತ್ವಾಕಾಂಕ್ಷೆಯು ಈಡೇರಿಕೆಯಾಗುವ ಸನ್ನಿಹದಲ್ಲಿದೆ. “ಮಂಗಳೂರಿನಲ್ಲಿ ಭಾರತದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದೆ. ಅಕಾಡೆಮಿ ಸ್ಥಾಪಿಸಲು 158 ಎಕರೆ KIADB ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಇದು ಐಸಿಜಿ ಅಧಿಕಾರಿಗಳಿಗೆ ಇನ್ನಿತರ ಆಸಕ್ತರಿಗೆ ವೃತ್ತಿಪರ ಕಡಲ ತರಬೇತಿ ಪಡೆಯಲು ಒಂದು ಮೈಲಿಗಲ್ಲು” ಎಂದು ಬೆಂಗಳೂರಿನ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಆರಂಭದಲ್ಲಿ ಕೇರಳದ ಅಜಿಕಲ್‌ನಲ್ಲಿ ಅಕಾಡೆಮಿ ಸ್ಥಾಪಿಸುವುದು ಎಂಬ ಯೋಜನೆ ಇತ್ತು. ಆದರೆ, ಕರಾವಳಿ ನಿಯಂತ್ರಣ ವಲಯದ ಅನುಮತಿಗಳನ್ನು, ಸಿಆರ್ ಝೆಡ್ -1 (ಎ) ಪ್ರದೇಶದಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲವೆಂದು ಪರಿಸರ ಮತ್ತು ಅರಣ್ಯ ಸಚಿವಾಲಯವು ನಿರಾಕರಿಸಿದ ಪರಿಣಾಮ, ಭಾರತೀಯ ಕೋಸ್ಟ್ ಗಾರ್ಡ್ ಈ ಯೋಜನೆಯನ್ನು ಕೈಬಿಟ್ಟಿತು. ಆಗಿನ ರಕ್ಷಣಾ ಸಚಿವರಾಗಿದ್ದ ಕೆ ಆಂಥೋನಿ ಅವರು 2011 ರ ಮೇ ತಿಂಗಳಲ್ಲಿ ಅಝಿಕ್ಕಲ್ ಯೋಜನೆಗೆ ಅಡಿಪಾಯ ಹಾಕಿದ್ದರು. ಆದರೆ 2019 ರವರೆಗೆ ಈ ಕುರಿತಂತೆ ಯಾವುದೇ ವಿಚಾರ ಮುಂದುವರೆಯಲಿಲ್ಲ.

ಇದನ್ನೂ ನೋಡಿ : ದ.ಕ ಜಿಲ್ಲೆಯಲ್ಲಿ ₹500 ಕೋಟಿ ಹೂಡಿಕೆ ಮಾಡಲಿದೆ ಟಾಟಾ!

ಆಗ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು, ಅಝಿಕ್ಕಲ್ ಯೋಜನೆಯನ್ನು MoEF ಕರ್ನಾಟಕಕ್ಕೆ ಸ್ಥಳಾಂತರಿಸಿ, ಕೇರಳದಿಂದ ಸರಿಸಲು ನಿರ್ಧರಿಸಿದರು. ಅವರು ರಾಜ್ಯಸಭೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ.

ಈ ಕುರಿತು ಸಂತಸವನ್ನು ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ವೃತ್ತಿಪರ ಅಧಿಕಾರಿಗಳು ಮತ್ತು ಸಿಬ್ಬಂದಿ ತರಬೇತಿಯಲ್ಲಿ ಇದೊಂದು ಮೈಲಿಗಲ್ಲು ಆಗಲಿದೆ ಎಂದರು.

ಅಝಿಕಲ್‌ನಲ್ಲಿನ 164 ಎಕರೆ ಪ್ರದೇಶವು ಎಜಿಮಾಲಾದ ಇಂಡಿಯನ್ ನೇವಲ್ ಅಕಾಡೆಮಿಯಿಂದ ದಕ್ಷಿಣಕ್ಕೆ 20 ಕಿ.ಮೀ ದೂರದಲ್ಲಿದೆ. ಕೇರಳ ರಾಜ್ಯವು ಎರಡು ಕಡಲ ಅಕಾಡೆಮಿಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಲ್ಲಿತ್ತು.

ಪ್ರಸ್ತುತ, ಕೋಸ್ಟ್ ಗಾರ್ಡ್ ಕೊಚ್ಚಿಯಲ್ಲಿರುವ ಒಂದು ಸಣ್ಣ ಸೌಲಭ್ಯದಲ್ಲಿ, ತರಬೇತಿ ಪಡೆದ ಅಧಿಕಾರಿಗಳ ಮೂಲಕ ತನ್ನ ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದೆ.

LEAVE A REPLY

Please enter your comment!
Please enter your name here