ಕೌಶಲ್ಯವು ಸ್ವಂತ ಅನುಭವ ಮತ್ತು ಪರಿಶ್ರಮದಿಂದ ಬೆಳೆಯುತ್ತದೆ : ಮೋದಿ

0
149
Tap to know MORE!

“ಕೌಶಲ್ಯಕ್ಕೆ ಮಿತಿ ಎಂಬುವುದಿಲ್ಲ. ಕೌಶಲ್ಯವು ಅವನನ್ನು ಅಥವಾ ಅವಳನ್ನು ಇತರರಿಗಿಂತ ಭಿನ್ನವಾಗಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು. “ಕೌಶಲ್ಯವು ನಮಗೆ ನಾವೇ ನೀಡುವ ಉಡುಗೊರೆಯಾಗಿದೆ. ಅದು ಸ್ವಂತ ಅನುಭವದೊಂದಿಗೆ ಬೆಳೆಯುತ್ತದೆ. ಆದ್ದರಿಂದ ಅದು ನಿಮ್ಮನ್ನು ಇತರರಿಗಿಂತ ಭಿನ್ನಗೊಳಿಸುತ್ತದೆ”ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶ್ವ ಯುವ ಕೌಶಲ್ಯ ದಿನದಂದು ರಾಷ್ಟ್ರದ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಈ ದಿನ ಸ್ಕಿಲ್ ಇಂಡಿಯಾ ಮಿಷನ್ ಪ್ರಾರಂಭವಾಗಿ ಐದು ವರ್ಷಗಳನ್ನು ಪೂರೈಸುತ್ತದೆ.

“ಕರೋನವೈರಸ್ ಸಾಂಕ್ರಾಮಿಕದ ಈ ಸಮಯದಲ್ಲಿ, ಕೆಲಸದ ಸ್ವರೂಪವೂ ಬದಲಾಗಿದೆ ಮತ್ತು ನಿರಂತರವಾಗಿ ಬದಲಾಗುತ್ತಿರುವ ಹೊಸ ತಂತ್ರಜ್ಞಾನದ ಮೇಲೂ ಇದು ಪರಿಣಾಮ ಬೀರಿದೆ. ಬದಲಾಗುತ್ತಿರುವ ಈ ಕಾಲದಲ್ಲಿ ಯುವಕರು ಹೊಸ ಕೌಶಲ್ಯಗಳನ್ನು ಪಡೆಯುತ್ತಿದ್ದಾರೆ, ”ಎಂದು ಮೋದಿ ಹೇಳಿದರು.

ಒಬ್ಬರ ಕೌಶಲ್ಯಗಳು, ಅವರನ್ನು ಹೇಗೆ ಸ್ವಾವಲಂಬಿಗಳನ್ನಾಗಿ ಮಾಡುತ್ತದೆ ಮತ್ತು ಈ ಕಠಿಣ ಸಮಯಗಳಲ್ಲಿಯೂ ಸಹ ಅವರು ಸ್ವಂತ ಪರಿಶ್ರಮದಿಂದ ಹೆಚ್ಚಿನ ಎತ್ತರಕ್ಕೆ ಹೇಗೆ ಕೊಂಡೊಯ್ಯಬಹುದು ಎಂಬುದರ ಕುರಿತು ಪ್ರಧಾನಿ ಮಾತನಾಡಿದರು.

ದೇಶಾದ್ಯಂತ ನೂರಾರು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಈ ಕೇಂದ್ರಗಳಲ್ಲಿ ಈವರೆಗೆ 5 ಕೋಟಿಗೂ ಹೆಚ್ಚು ಜನರು ಕೌಶಲ್ಯ ಅಭಿವೃದ್ಧಿಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.

ವಿಶ್ವ ಯುವ ಕೌಶಲ್ಯ ದಿನಾಚರಣೆಯು ವಿಶ್ವ ಸಂಸ್ಥೆಯಿಂದ ಮಾನ್ಯತೆ ಪಡೆದ ದಿನವಾಗಿದೆ ಮತ್ತು ಇದನ್ನು ಪ್ರತಿವರ್ಷ ಜುಲೈ 15 ರಂದು ಗುರುತಿಸಲಾಗುತ್ತದೆ.

LEAVE A REPLY

Please enter your comment!
Please enter your name here