ಬಿಗ್‌ಬಾಸ್ 14 : ಎಲ್ಲಾ ವದಂತಿಗಳಿಗೆ ತೆರೆ ಎಳೆದ ಕ್ಯಾರಿ ಮಿನಾಟಿ

0
218
Tap to know MORE!

ಕ್ಯಾರಿ ಮಿನಾಟಿ ಎಂದೇ ಜನಪ್ರಿಯವಾಗಿರುವ ಯೂಟ್ಯೂಬರ್ ಅಜೆಯ್ ನಗರ್ ಅವರು ಇಂದು (ಸೆಪ್ಟೆಂಬರ್ 16) ಸಲ್ಮಾನ್ ಖಾನ್ ಅವರು ನಡೆಸಿಕೊಂಡು ಹೋಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 14 ರ ಭಾಗವಾಗಲಿದ್ದಾರೆ ಎಂದು ಹರಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಹೇಳಿಕೊಂಡ ಕ್ಯಾರಿ ಮಿನಾಟಿ, ಎಲ್ಲಾ ವದಂತಿಗಳನ್ನು ತಳ್ಳಿಹಾಕಿದರು. “ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ! ನೀವು ಓದುವ ಎಲ್ಲಾ ಸುದ್ದಿಗಳನ್ನು ನಂಬಬೇಡಿ” ಎಂದಿದ್ದಾರೆ.

ನಿನ್ನೆ ಸಂಜೆಯಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿತ್ತು. ಕಳೆದ ವರ್ಷ ಬಿಗ್ ಬಾಸ್ ಬಗ್ಗೆ ಖಾರವಾಗಿ ಟೀಕಿಸಿದ್ದ ಇದೇ ಕ್ಯಾರಿ ಮಿನಾಟಿ, ಬಿಗ್‌ಬಾಸ್ ಮನೆಗೆ ಹೋಗಲು ಹೇಗೆ ಸಾಧ್ಯ ಎಂಬಿತ್ಯಾದಿ ಚರ್ಚೆಗಳು ನೆಟ್ಟಿಗರ ನಡುವೆ ನಡೆಯುತ್ತಿತ್ತು.

LEAVE A REPLY

Please enter your comment!
Please enter your name here