ಹೊಸ ಭಾಂದವ್ಯ ರೂಪಿಸುವ ಆಟ ಕ್ರಿಕೆಟ್

0
271
Tap to know MORE!

ರವಿವಾರದ ರವಿ ಬಾನಲ್ಲಿ ಮೂಡಿದನೆಂದರೆ ಆಟದ ಮೈದಾನ ಪಡ್ಡೆ ಯುವಕರ ಗುಂಪಿನಿಂದ ತುಂಬಿರುತ್ತದೆ. ಹುಡುಗಿಯರಿಗೆ ಸೀರಿಯಲ್ ಲೈಫ್ ಆದರೆ, ಹುಡುಗರಿಗೆ ಕ್ರಿಕೆಟ್ ಜೀವನ ಮಾತ್ರವಲ್ಲ ಜೀವವೂ ಆಗಿರುತ್ತದೆ. ಈಗಿನ ಲಾಕ್ ಡೌನ್ ಸಮಯದಲ್ಲಂತೂ ಕ್ರಿಕೆಟ್ ಮನದ ಜಿದ್ದನ್ನು ಕಳೆದು ಉತ್ಸಾಹ ತುಂಬುತ್ತಿದೆ. ಆದರೆ ದೇಶದೆಲ್ಲೆಡೆ ತಾಂಡವವಾಡುತ್ತಿರುವ ಮಹಾಮಾರಿ ಕೊರೋನ,ಮನಸೆಳೆಯುವ ಕ್ರಿಕೆಟ್ ಆಟಕ್ಕೂ ವಕ್ಕರಿಸಿದೆ !ಆದರೆ ಕ್ರಿಕೆಟ್ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಆಟವೇ!

ಕ್ರಿಕೆಟ್ ಆಟವು 16 ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಮೊದಲಿಗೆ ಆಡಲ್ಪಟ್ಟು, ನಂತರ 18 ನೇ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಯಿತು. ಕ್ರಿಕೆಟ್ ಹಲವಾರು ನಿಯಮಗಳನ್ನು ಹೊಂದಿದ್ದು ನಿಯಮಕ್ಕೆ ಅನುಸಾರವಾಗಿ ಆಟವನ್ನು ಆಡಬೇಕು.ಕ್ರಿಕೆಟ್ ಆಟವಾಡಲು 11 ಜನ ಆಟಗಾರರು ಇರಬೇಕು. ಭಾರತದಲ್ಲಿ ಪ್ರತಿ ವರ್ಷ ಐಪಿಎಲ್ (IPL ) ಪಂದ್ಯಾಟ ನಡೆಯುತ್ತದೆ. ಇದರಲ್ಲಿ ಭಾರತೀಯ ಆಟಗಾರರೊಂದಿಗೆ ವಿದೇಶಿ ಆಟಗಾರಿರುತ್ತಾರೆ. ಇದು ನಮ್ಮ ದೇಶದ ಹೆಮ್ಮೆ. ಭಾರತದಲ್ಲಿ ಕ್ರಿಕೆಟ್ ನ ಹಲವಾರು ವಿಭಾಗಗಳಿವೆ ಇದರಲ್ಲಿ ಉತ್ತಮ ಕ್ರೀಡಾಪಟುವನ್ನು ಭಾರತದ ತಂಡಕ್ಕೆ ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಅವಕಾಶ ಸಿಗುತ್ತದೆ.

ಧಂಗು ಬಡೆದ ‘ದಂಗಲ್’ ಖ್ಯಾತಿಯ ರೋಹಿತ್ ಸರದಾನ!

ಕ್ರಿಕೆಟ್ ಆಟವು ಮನೋರಂಜನೆಯ ಆಟವಾಗಿದೆ. ಕರಾವಳಿ ಪ್ರದೇಶದಲ್ಲಿ ಅಂಡರ್ ಆರ್ಮ್ ಮತ್ತು ಓವರ್ ಆರ್ಮ್ ಎಂಬ ಎರಡು ರೀತಿಯ ವಿಭಾಗವಿದ್ದು ಅಂಡರ್ ಆರ್ಮ್ ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತದೆ. ಇದು ಯುವಕರಿಗೆ ಅತ್ಯoತ ಮನೋರoಜನೆ ನೀಡುತ್ತದೆ. ಕೊರೋನ ಎಂಬ ಮಹಾಮಾರಿಯಿಂದ ಈಗಿನ ಯುವಕ -ಯುವತಿಯರಿಗೆ ಸಂಬಂಧದ ಬೆಲೆ ಎಲ್ಲವೂ ಅರಿವಾಗು ತ್ತಿದೆ. ಮುಸ್ಸಂಜೆಯ ಸಮಯದಲ್ಲಿ ಗೆಳೆಯರೊಂದಿಗೆ ಕೂಡಿ ತನ್ನ ನೋವುಗಳನ್ನೆಲ್ಲ ಮರೆತು ಜಾತಿ, ಭೇದ, ಇಲ್ಲದೆ ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ, ಕೂಡಿ ಆಡುತ್ತಾರೆ. ಗಾಳಿ, ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಎಲ್ಲರೂ ಕೂಡಿ ಒಟ್ಟಾಗಿ ಸಂತೋಷದಿಂದ ಆಟವಾಡುತ್ತಾರೆ. ಎಷ್ಟೇ ಜಗಳಗಳು, ಕೋಪ , ಮತ್ಸರವಿದ್ದರೂ ಆಟವಾಡುವಾಗ ಯಾವುದನ್ನು ಮನಸಿನಲ್ಲಿ ಇಡದೆ ಜೊತೆಗೂಡಿ ಆಡುವುದೇ ಕ್ರಿಕೆಟ್. ಒಬ್ಬನ ಮನಸಿನಲ್ಲಿ ಬೇಜಾರು ಇದ್ದಾಗ ಸಂಜೆ ಸಮಯದಲ್ಲಿ ಆಟದ ಮೈದಾನಕ್ಕೆ ಹೋಗಿ ಗೆಳೆಯರೊಂದಿಗೆ ಜೊತೆಗೂಡಿ ಆಡಿದರೆ ಯಾವ ನೋವು ನೆನಪಿಗೆ ಬಾರದು. ತನ್ನ ನೋವನ್ನು, ಕಷ್ಟ, ತೊಂದರೆಯನ್ನು ಮರೆಯಬೇಕಾದರೆ ಗೆಳೆಯರೊಂದಿಗೆ ಕೂಡಿ ಆಡಿದರೆ ಯಾವ ನೋವು ಇದ್ದರೂ ಮರೆತು ಹೋಗುತ್ತದೆ. ಗೆಳೆಯರೊಂದಿಗೆ ಜೊತೆಗೂಡಿ ಆಡಿದರೆ ಮನಸ್ಸಿಗೆ ನೆಮ್ಮದಿ, ಸಂತೋಷ ಕೊಡುತ್ತದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ರಕ್ಷಿತಾ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು

LEAVE A REPLY

Please enter your comment!
Please enter your name here