BREAKING| ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ|ಪಾರ್ಟಿ ನಡೆಸುವಂತಿಲ್ಲ, ಹೆಚ್ಚು ಜನರು ಸೇರುವಂತಿಲ್ಲ!

0
93
Tap to know MORE!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಈ ಬಾರಿಯ ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಾರ್ವಜನಿಕ ಆಚರಣೆಗೆ ಬ್ರೇಕ್‌ ಹಾಕಿದ್ದು, ಸರಳ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವಂತೆ ತಿಳಿಸಿದೆ.

ಈ ಕುರಿತು ಸುತ್ತೋಲೆಯನ್ನ ಹೊರಡಿಸಿರುವ ರಾಜ್ಯ ಸರ್ಕಾರ, ಆಚರಣೆ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಜನರು ಸೇರುವ ಪಾರ್ಟಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶ ನೀಡಿದೆ. ಇನ್ನು ದೀಪಾವಳಿಗೆ ಹಸಿರು ಪಟಾಕಿಗಳನ್ನ ಮಾತ್ರ ಹಚ್ಚಲು ಹೊರಡಿಲಾಗಿದ್ದ ಸರ್ಕಾರದ ಆದೇಶದ ಜೊತೆಗೆ ಮಾರ್ಗಸೂಚಿಗಳನ್ನ ಪಾಲಿಸಬೇಕು ಎಂದಿದೆ.

ಪಬ್​, ಬಾರ್​ , ಕ್ಲಬ್​ ರೆಸ್ಟೋರೆಂಟ್​ಗಳಲ್ಲಿ ಈ ಸಂಭ್ರಮ ಆಚರಿಸಬಹುದು. ಆದರೆ, ಇದಕ್ಕೆ ಕೆಲವು ನಿಬಂಧನೆಗಳನ್ನು ಸರ್ಕಾರ ವಿಧಿಸಿದೆ. ಕ್ರಿಸ್ಮಸ್​ ಹಾಗೂ ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಪಾಲಿಸಬೇಕಾದ ನಿಯಮಗಳ ಕುರಿತು ಸರ್ಕಾರ ನಿಯಾಮಾವಳಿ ಬಿಡುಗಡೆ ಮಾಡಿದೆ. ಅದರಲ್ಲಿ ಮುಖ್ಯವಾಗಿ ಈ ಹಸ್ತಲಾಘವ ಹಾಗೂ ಆಲಿಂಗನ ಮಾಡದಂತೆ ಸೂಚನೆ ನೀಡಲಾಗಿದೆ.

ಕ್ರಿಸ್ಮಸ್​ ಹಾಗೂ ಹೊಸ ವರ್ಷದಂದು ಕಟ್ಟುನಿಟ್ಟಿನ ಸರುಕ್ಷತಾ ಕ್ರಮಗಳನ್ನು ಆಯೋಜಕರು ಜಾರಿಗೆ ತರಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ, ಯಾವುದೇ ಡಿಜೆ ಪಾರ್ಟಿ, ಡ್ಯಾನ್ಸ್​ ಪಾರ್ಟಿಗಳಿಗೆ ಅನುಮತಿ ನೀಡಬಾರದು. ಜೊತೆಗೆ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲನೆ ಮಾಡಬೇಕಿದ್ದು, ಮಾಸ್ಕ್​ ಪ್ರತಿಯೊಬ್ಬರು ಧರಿಸಬೇಕು ಎಂದು ತಿಳಿಸಿದೆ.

  • ಚರ್ಚ್ ಗಳಲ್ಲಿ ಒಮ್ಮೆಗೆ ಹೆಚ್ಚು ಜನ ಸೇರದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು
  • ಕೋವಿಡ್ ತಡೆಗಟ್ಟಲು ಆಲಿಂಗನ ಮತ್ತು ಹಸ್ತಲಾಘವ ನಿಷೇಧ.
  • ಕ್ಲಬ್, ಪಬ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಗಳಲ್ಲಿ 30 ಡಿಸೆಂಬರ್ ನಿಂದ ಜನವರಿ 2ರ ವರೆಗೆ ಜನ ಸೇರಿಸುವ ಪಾರ್ಟಿ ನಡೆಸುವಂತಿಲ್ಲ, ಡಿಜೆ, ಡ್ಯಾನ್ಸ್, ಹೆಚ್ಚು ಜನ ಸೇರುವ ಗೆಟ್ ಟುಗೆದರ್ ನಡೆಸುವಂತಿಲ್ಲ
  • ಆಯ್ದ ರಸ್ತೆ, ಸ್ಥಳಗಳಿಗೆ ಸ್ಥಳೀಯ ಪೋಲೀಸ್ ಆಯುಕ್ತರು/ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧ ವಿಧಿಸಬಹುದು
  • 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲೇ ಇರತಕ್ಕದ್ದು.
  • ಹೋಟೆಲ್, ಪಬ್, ಪಾರ್ಟಿ ಹಾಲ್, ರೆಸ್ಟೋರೆಂಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ
  • ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ ಅಂತಹಾ ಪ್ರದೇಶಗಳು ಸರತಿಯಲ್ಲಿ ಜನರನ್ನು ಒಳಬಿಡುವ ವ್ಯವಸ್ಥೆ ಮಾಡಬೇಕು. ಸಾಧ್ಯವಿರುವ ಕಡೆ ಮುಂಗಡ ಬುಕ್ಕಿಂಗ್, ಟೋಕನ್ ವ್ಯವಸ್ಥೆ, ಆನ್ ಲೈನ್ ಬುಕಿಂಗ್ ಮಾಡಬಹುದು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು
  • ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಲು ಅವಕಾಶ
  • ಈ ಎಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಪಾಲಿಕೆ, ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಎಲ್ಲಾ ನಿಯಮಗಳ ಪಾಲನೆ ಆಗಲೇಬೇಕು
  • ತಪ್ಪಿದವರು ದಂಡ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ

LEAVE A REPLY

Please enter your comment!
Please enter your name here