ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ಫಿಕ್ಸ್!

0
199
Tap to know MORE!

ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಚಿಕಿತ್ಸೆಗೆ ಅನುಮತಿ ನೀಡಿದ್ದ ಸರ್ಕಾರ, ಇಂದು ಚಿಕಿತ್ಸೆಗೆ ದರ ನಿಗದಿಪಡಿಸಿದೆ. ಇದರೊಂದಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ ಗಳನ್ನು ಕೊರೋನಾ ರೋಗಿಗಳಿಗೆ ಮೀಸಲಿಡಬೇಕು ಎಂದು ಆದೇಶ ಹೊರಡಿಸಿದೆ.

ಸರಕಾರವು ಎರಡು ರೀತಿಯ ರೇಟ್ ಅನ್ನು ನಿಗದಿಪಡಿಸಿದೆ. ಆರೋಗ್ಯ ಇಲಾಖೆಯ ಮೂಲಕ ಬರುವ ರೋಗಿಗಳಿಗೊಂದು ದರವಾದರೆ, ನೇರವಾಗಿ ಆಸ್ಪತ್ರೆಗೆ ದಾಖಲಾಗುವವರಿಗೆ ಮತ್ತೊಂದು ದರ.

ಪಿಪಿಇಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ, ಕೊರೋನಾ ರೋಗಿಗಳ ಚಿಕಿತ್ಸೆಗೆ ಈ ಕೆಳಗಿನ ಪ್ಯಾಕೇಜ್ ದರಗಳು ಅನ್ವಯವಾಗುತ್ತವೆ

ಆರೋಗ್ಯ ಇಲಾಖೆಯ ಮೂಲಕ ಬಂದವರಿಗೆ:

  1. ಜನರಲ್ ವಾರ್ಡ್ – ₹5,200
  2. ಎಚ್.ಡಿ.ಯು – ₹7,000
  3. ವೆಂಟಿಲೇಟರ್ ರಹಿತ ಐಸಿಯು – ₹8,500
  4. ವೆಂಟಿಲೇಟರ್ ಸಹಿತ ಐಸಿಯು – ₹10,000

ನೇರವಾಗಿ ಆಸ್ಪತ್ರೆಗೆ ದಾಖಲಾದರೆ,

  1. ಜನರಲ್ ವಾರ್ಡ್ – ₹10,000
  2. ಎಚ್.ಡಿ.ಯು – ₹12,000
  3. ವೆಂಟಿಲೇಟರ್ ರಹಿತ ಐಸಿಯು – ₹15,000
  4. ವೆಂಟಿಲೇಟರ್ ಸಹಿತ ಐಸಿಯು – ₹25,000

ಸರಕಾರವು ಕೊರೋನಾ ಚಿಕಿತ್ಸೆಗೆ ಪಟ್ಟಿ ಮಾಡಿರುವ ಖಾಸಗಿ ಆಸ್ಪತ್ರೆಗಳ ಪಟ್ಟಿ ಇಲ್ಲಿದೆ ನೋಡಿ

LEAVE A REPLY

Please enter your comment!
Please enter your name here