ಗಂಗಾನದಿಯಲ್ಲಿ ತೇಲಿ ಬಂದ ಪೆಟ್ಟಿಗೆ ಒಳಗಿತ್ತು ನವಜಾತ ಶಿಶು | ಕಂದಮ್ಮನ ಪಾಲನೆಯ ಜವಾಬ್ದಾರಿ ಸರ್ಕಾರದ್ದು ಎಂದ ಯೋಗಿ

0
240
Tap to know MORE!

ಉತ್ತರ ಪ್ರದೇಶ(ಜೂ.17): ಗಂಗಾ ನದಿಯಲ್ಲಿ ದೋಣಿ ಮೂಲಕ ಜೀವ ಸಾಗಿಸುತ್ತಿದ್ದ ದೋಣಿಗಾರನಿಗೆ ಗುಲ್ಲು ಚೌದರಿಗೆ ಅಚ್ಚರಿ ಕಾದಿತ್ತು. ಕಾರಣ ನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿ ಬಂದಿದೆ. ಅಲಂಕರಿಸಿದ್ದ ಈ ಪೆಟ್ಟಿಗೆಯತ್ತ ತನ್ನ ದೋಣಿಯನ್ನು ಹುಟ್ಟು ಹಾಕಿ ಹರಸಾಹಸ ಮಾಡಿ ದಡ ಸೇರಿಸಿದ್ದಾನೆ. ಇನ್ನು ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಪುಟ್ಟ ಕಂದಮ್ಮ ನಿದ್ರಿಸುತ್ತಿದೆ.

ಹೆಣ್ಣು ಮಗುವನ್ನು ಪೆಟ್ಟೆಯಲ್ಲಿಟ್ಟು ಗಂಗಾ ನದಿಯಲ್ಲಿ ತೇಲಿ ಬಿಟ್ಟ ಪುಣ್ಯಾತ್ಮರು ಯಾರು ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಆದರೆ ಪುಟ್ಟ ಕಂದಮ್ಮನ ಪಡೆದ ಗುಲ್ಲು ಚೌಧರಿ ಸಂತಸ ಹೇಳತೀರದು. ಗಂಗಾ ನದಿ ನೀಡಿದ ಉಡುಗೊರೆ ಎಂದು ಸ್ವೀಕರಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಸೋನಿಯಾ ಗಾಂಧಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ: ಕಾಂಗ್ರೆಸ್

ಶಿಶು ವೈದ್ಯಕ್ಷೀಯ ಪರೀಕ್ಷೆಗಳನ್ನು ನಡೆಸಿ ಪೊಷಕರ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ಈ ಮಗುವಿನ ಪೋಷಣೆ ಜವಾಬ್ದಾರಿ ಯಾರಿಗೆ ನೀಡಬೇಕು ಅನ್ನೋ ಕುರಿತು ಪೊಲೀಸರು ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ ಮಗುವನ್ನು ರಕ್ಷಿಸಿದ ಗುಲ್ಲಾ ಚೌಧರಿಗಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಪಾಲನೆ-ಪೋಷಣೆ ಸರ್ಕಾರದ ಜವಾಬ್ದಾರಿ: ಯೋಗಿ

ಮುಂಜಾನೆ – ಮುಸ್ಸಂಜೆಯ ವಾಕ್ ನಲ್ಲಿ ಅರಳಿದ ಪ್ರೀತಿ

ಗಂಗಾ ನದಿಯಲ್ಲಿ ತೇಲುತ್ತಿರುವ ಮರದ ಪೆಟ್ಟಿಗೆಯೊಳಗೆ ಪತ್ತೆಯಾದ ನವಜಾತ ಹೆಣ್ಣು ಶಿಶುವಿನ ಪಾಲನೆ – ಪೋಷಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ ಮತ್ತು ಅವಳನ್ನು ರಕ್ಷಿಸಿದ ದೋಣಿಗಾರನಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

“ಗಾಜಿಪುರದ ಗಂಗಾ ಮಾತೆಯ ತೇಲುತ್ತಿರುವ ಪೆಟ್ಟಿಗೆಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಮಗುವಿನ ಜೀವವನ್ನು ಉಳಿಸಿದ ದೋಣಿಗಾರ ಮಾನವೀಯತೆಯ ವಿಶಿಷ್ಟ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದಾರೆ” ಎಂದು ಆದಿತ್ಯನಾಥ್ ಅವರು ಟ್ವೀಟ್ ಮಾಡಿದ್ದಾರೆ. “ಕೃತಜ್ಞತೆಯ ಸಂಕೇತವಾಗಿ, ದೋಣಿಗಾರ ಸರ್ಕಾರದಿಂದ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾನೆ. ನವಜಾತ ಹೆಣ್ಣು ಮಗುವಿನ ಪಾಲನೆಗೆ ಉತ್ತರ ಪ್ರದೇಶ ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದೆ” ಎಂದು ಆದಿತ್ಯನಾಥ್ ಹೇಳಿದರು.

LEAVE A REPLY

Please enter your comment!
Please enter your name here