ಮುಂದಿನ ವಾರ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಹೊರಡಿಸಲಾದ ಹೊಸ ಮಾರ್ಗಸೂಚಿಗಳಲ್ಲಿ ಗಣೇಶ ಪೆಂಡಾಲ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸುವುದರ ಜೊತೆಗೆ ಸಾರ್ವಜನಿಕ ಜಲಮೂಲಗಳಲ್ಲಿ ವಿಗ್ರಹಗಳನ್ನು ವಿಸರ್ಜಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.
ಖಾಸಗಿಯಾಗಿ ಗಣೇಶ ವಿಗ್ರಹಗಳನ್ನು ಖರೀದಿಸುವಾಗ ಮತ್ತು ಸ್ಥಾಪಿಸುವಾಗ ಅಥವಾ ವಿಗ್ರಹಗಳನ್ನು ಬಾವಿಗಳಲ್ಲಿ ವಿಸರ್ಜಿಸುವಾಗ ಯಾವುದೇ ಸಾರ್ವಜನಿಕ ಮೆರವಣಿಗೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : ಗಣೇಶೋತ್ಸವ ಆಚರಣೆಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯ ಸರ್ಕಾರ
“ಜನರು ತಮ್ಮ ಮನೆಗಳಲ್ಲಿ ಅಥವಾ ದೇವಾಲಯಗಳಲ್ಲಿ ಸರಳ ರೀತಿಯಲ್ಲಿ ಪೂಜೆ ಸಲ್ಲಿಸುವಂತೆ ಕೋರಲಾಗಿದೆ. ಮಣ್ಣಿನ ವಿಗ್ರಹಗಳನ್ನು ತಮ್ಮ ಮನೆಗಳಲ್ಲಿ ಪೂಜಿಸುವವರು ತಮ್ಮ ಮನೆಗಳಲ್ಲಿ ಜಲವಿಸರ್ಜನೆ ಮಾಡಬೇಕೆಂದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಕೊರೊನಾ ಕಾರಣದಿಂದ ಎಲ್ಲಾ ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಲಾಗಿದೆ
ದೇವರನ್ನು ಪೂಜಿಸುವ ದೇವಾಲಯಗಳು ಪ್ರತಿದಿನ ತಮ್ಮ ಆವರಣವನ್ನು ಸ್ವಚ್ಚಗೊಳಿಸಬೇಕು. ಸಾಮಾಜಿಕ ದೂರವನ್ನು ಕಾಪಾಡಿಕೊಂಡ ಭಕ್ತರಿಗೆ ಮಾತ್ರ ಮುಖಗವಸುಗಳೊಂದಿಗೆ ಪ್ರವೇಶಿಸಲು ಅವಕಾಶ ನೀಡಬೇಕು. ಪ್ರವೇಶದ್ವಾರದಲ್ಲಿ ದೇಹದ ಉಷ್ಣ ತಪಾಸಣೆ ಮತ್ತು ಸ್ಯಾನಿಟೈಸೇಷನ್ ಸಹ ಕಡ್ಡಾಯವಾಗಿದೆ.
ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು.
[…] ಓದಿ : ರಾಜ್ಯ ಸರ್ಕಾರ ಈ ಮೊದಲು ಹೊರಡಿಸಿದ […]
JosiahCTFontana