ಗಾಂಜಾ ಅಪಾಯಕಾರಿ ಅಲ್ಲ – ವಿಶ್ವಸಂಸ್ಥೆಯ ನಿರ್ಧಾರಕ್ಕೆ ಭಾರತ ಬೆಂಬಲ!

0
186
Tap to know MORE!

ನವದೆಹಲಿ: ಮಾದಕ ದ್ರವ್ಯ ವಸ್ತುಗಳಿಗೆ ಸಂಬಂಧಿಸಿದ ಆಯೋಗದ ಅಧಿವೇಶನ ಡಿಸೆಂಬರ್ 2ರಿಂದ 4ರವರೆಗೆ ವಿಶ್ವಸಂಸ್ಥೆಯಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಗಾಂಜಾ ಹಾಗೂ ಗಾಂಜಾ ಅಂಟನ್ನು ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಿಂದ ಹೊರಗಿಟ್ಟು ಮಹತ್ವದ ನಿರ್ಧಾರ ಪ್ರಕಟಿಸಿದೆ.

ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಆಯೋಗದ 1961ರ ಒಪ್ಪಂದದ 4ನೇ ಅನುಚ್ಛೇದದಡಿ ಹೆರಾಯಿನ್ನಂತಹ ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿ ಗಾಂಜಾ ಇತ್ತು. ಈ ಪಟ್ಟಿಯಿಂದ ಗಾಂಜಾವನ್ನು ಹೊರಗಿಡಲು 53 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ: ಭಾರತದಿಂದ ಮಲಯಾಳಂ ಚಿತ್ರ “ಜಲ್ಲಿಕಟ್ಟು” ನಾಮನಿರ್ದೇಶನ

ಅಧಿವೇಶನದಲ್ಲಿ ಭಾರತ, ಅಮೆರಿಕ, ಯುರೋಪ್ ಒಕ್ಕೂಟದ ಬಹುತೇಕ ದೇಶಗಳು ಸೇರಿ 27 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾವಣೆ ಮಾಡಿದ್ದರೆ ಚೀನಾ, ಪಾಕಿಸ್ತಾನ, ರಷ್ಯಾ ಸೇರಿ 25 ದೇಶಗಳು ವಿರುದ್ಧ ಹಾಕಿದವು. ಉಕ್ರೇನ್ ತಟಸ್ಥವಾಗಿ ನಿಂತಿತು.
ಅಪಾಯಕಾರಿ ಮಾದಕ ವಸ್ತುಗಳ ಪಟ್ಟಿಯಲ್ಲಿದ್ದ ಕಾರಣ ಗಾಂಜಾವನ್ನು ಔಷಧಿ ಹಾಗೂ ಚಿಕಿತ್ಸೆಗೆ ಬಳಸಲು ಸಾಧ್ಯವಾಗಿರಲಿಲ್ಲ. ಇನ್ನೂ ಮುಂದೆ ಎಲ್ಲ ಕಡೆ ಬಳಸಬಹುದಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಾರತದಲ್ಲೂ ಸಡಿಲವಾಗುತ್ತಾ ಕಾನೂನು ?
ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ 1985ರ ಪ್ರಕಾರ ಪ್ರಕಾರ ಗಾಂಜಾ ಉತ್ಪಾದನೆ, ಮಾರಾಟ, ಖರೀದಿ, ವಶದದಲ್ಲಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.

ಎನ್ಡಿಪಿಎಸ್ ಕಾಯ್ದೆಯಡಿ ಚಿತ್ರರಂಗ ನಟ, ನಟಿಯರನ್ನು ಬಂಧಿಸಲಾಗಿದೆ. ಈಗ ಭಾರತ ನಿರ್ಣಯದ ಪರವಾಗಿ ಮತದಾನ ಮಾಡಿದ್ದು ಮುಂದಿನ ದಿನಗಳಲ್ಲಿ ಕಠಿಣವಾಗಿರುವ ಎನ್ಡಿಪಿಎಸ್ ಕಾಯ್ದೆ ಮೃದುವಾಗುತ್ತಾ ಎಂಬ ಪ್ರಶ್ನೆ ಎದ್ದಿದ್ದು ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನು ಪ್ರಕಟಿಸುತ್ತದೆ ಎಂಬ ಕುತೂಹಲ ಮೂಡಿದೆ.

LEAVE A REPLY

Please enter your comment!
Please enter your name here