15 ವರ್ಷದ ಇಂಡೋ-ಅಮೇರಿಕನ್ ಗೀತಾಂಜಲಿ ರಾವ್ ಟೈಮ್ಸ್ “ಕಿಡ್ ಆಫ್ ದ ಇಯರ್” ಆಗಿ ಆಯ್ಕೆ

0
152
Tap to know MORE!

ನ್ಯೂಯಾರ್ಕ್: 15 ವರ್ಷದ ಇಂಡೋ ಅಮೇರಿಕನ್ ಬಾಲಕಿ, ಅದ್ಭುತ ಯುವ ವಿಜ್ಞಾನಿ ಮತ್ತು ಸಂಶೋಧಕಿ ಗೀತಾಂಜಲಿ ರಾವ್ ಅವರನ್ನು ಟೈಮ್ಸ್ ನಿಯತಕಾಲಿಕೆಯು ಮೊದಲ ಬಾರಿಗೆ “ವರ್ಷದ ಕಿಡ್” ಎಂದು ಹೆಸರಿಸಿದೆ. ಕಲುಷಿತ ಕುಡಿಯುವ ನೀರಿನಿಂದ ಹಿಡಿದು ಒಪಿಯಾಡ್ ಚಟ ಮತ್ತು ಸೈಬರ್ ಬೆದರಿಕೆ ವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಈ ಗರಿಮೆ ಸಂದಿದೆ.

ಗೀತಾಂಜಲಿ ರಾವ್ ಅವರು 5,000ಕ್ಕೂ ಹೆಚ್ಚಿದ್ದ ನಾಮಿನಿಗಳ ನಡುವೆ ಆಯ್ಕೆ ಆಗಿ ಟೈಮ್ಸ್ ನ ವರ್ಷದ ಕಿಡ್ ಆಗಿ ಆಯ್ಕೆ ಮಾಡಲಾಗಿದೆ. ನಟ ಏಂಜಲೀನಾ ಜೋಲೀ ಅವರು ಸಂದರ್ಶನ ನಿರ್ವಹಿಸಿದರು.

ಇದನ್ನೂ ಓದಿ: Pfizer-BioNTech ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಇಂಗ್ಲೆಂಡ್ ಸರ್ಕಾರ!

“ಕೊಲೊರಾಡೋದಲ್ಲಿನ ತನ್ನ ಮನೆಯಿಂದ ಜೋಲಿ ಅವರೊಂದಿಗಿನ ವರ್ಚುವಲ್ ಮಾತುಕತೆಯ ಸಮಯದಲ್ಲಿ ಗೀತಾಂಜಲಿ ರಾವ್ ತನ್ನ ಪ್ರಕ್ರಿಯೆಯ ಬಗ್ಗೆ ತಿಳಿಸಿ, ಬುದ್ದಿಮತ್ತೆ, ಸಂಶೋಧನೆಯ ಮೂಲಕ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿದರೆಂಬ ಅನುಭವಗಳನ್ನು ಹಂಚಿಕೊಂಡರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕಲುಷಿತ ಕುಡಿಯುವ ನೀರಿನಿಂದ ಹಿಡಿದು ಒಪಿಯಾಡ್ ಚಟ ಮತ್ತು ಸೈಬರ್ ಬೆದರಿಕೆ ವರೆಗಿನ ಸಮಸ್ಯೆಗಳನ್ನು ನಿಭಾಯಿಸಲು ತಂತ್ರಜ್ಞಾನವನ್ನು ಬಳಸುವ ತನ್ನ ಕೆಲಸದ ಬಗ್ಗೆ ಮತ್ತು ಪ್ರಪಂಚದಾದ್ಯಂತದ ಸಮಸ್ಯೆಗಳನ್ನು ಪರಿಹರಿಸಲು ಯುವ ನಾವೀನ್ಯಕಾರರ ಜಾಗತಿಕ ಸಮುದಾಯವನ್ನು ರಚಿಸುವ ತನ್ನ ಧ್ಯೇಯದ ಬಗ್ಗೆ ಅವರು ಮಾತನಾಡಿದರು.

LEAVE A REPLY

Please enter your comment!
Please enter your name here