BREAKING : ಮಂಗಳೂರಿನಲ್ಲಿ ಗುಂಡಿನ ದಾಳಿ | ನಾಲ್ವರಿಗೆ ಗಂಭೀರ ಗಾಯ

0
206

ಮಂಗಳೂರು: ಮಂಗಳೂರಿನ ಫಳ್ನೀರ್ ಬಳಿ ಯುವಕರಿಂದ ಗುಂಡಿನ ದಾಳಿ ನಡೆದಿದ್ದು, ಹೊಟೇಲ್ ಸಿಬ್ಬಂದಿ ಮೇಲೆ ಅಪರಿಚಿತರ ತಂಡ ಗುಂಡು ಹಾರಿಸಿದೆ.

ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಮತ್ತು ಫ್ರೆಶ್ ಮಾರ್ಟ್ ಬಳಿ ದಾಳಿ ನಡೆದಿದ್ದು, ಹೊಟೇಲ್ ನಲ್ಲಿ ಸಮೂಸ ಕೇಳಲು ಬಂದು ನಾಲ್ವರ ತಂಡ ಗಲಾಟೆ ಮಾಡಿದೆ. ಈ ವೇಳೆ ಹೊಟೇಲ್ ಗೆ ದಾಳಿ ಮಾಡಿ ಇಬ್ಬರು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹೊಟೇಲ್ ನ ಗಾಜು, ಪೀಠೋಪಕರಣ ಧ್ವಂಸಗೈದು ಪರಾರಿಯಾಗಿದ್ದಾರೆ.

ಫಳ್ನೀರ್ ನಿವಾಸಿ ಸಾಹಿಲ್ (30) ಮತ್ತು ಸುರತ್ಕಲ್ ನಿವಾಸಿ ಸೈಫ್ (25) ಗಾಯಗೊಂಡವರು. ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ : ವಿದ್ಯಾರ್ಥಿನಿಯನ್ನು ಹಾಡಹಗಲೇ ಕೊಂದ ದುಷ್ಕರ್ಮಿಗಳು – “ಲವ್ ಜಿಹಾದ್” ಎಂದು ಆರೋಪಿಸಿದ ಕುಟುಂಬಸ್ಥರು!

ಈ ವೇಳೆ ಹಿಡಿಯಲು ಯತ್ನಿಸಿದ ಹೊಟೇಲ್ ಸಿಬ್ಬಂದಿ ಮೇಲೆ ಎರಡು ಸುತ್ತು ಗುಂಡು ಹಾರಾಟ ಮಾಡಿದ್ದಾರೆ. ಒಂದು ಗುಂಡು ತಗುಲಿ ಹೊಟೇಲ್ನ ಓರ್ವ ಸಿಬ್ಬಂದಿಗೆ ಗಾಯವಾಗಿದ್ದು, ಗುಂಡು ಹಾರಿಸಿ ಪರಾರಿಯಾಗಲೆತ್ನಿಸಿದ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಇನ್ನಿಬ್ಬರು ಆಟೋ ರಿಕ್ಷಾ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೂರ್ವದ್ವೇಷದ ಹಿನ್ನೆಲೆ ಉದ್ದೇಶಪೂರ್ವಕವಾಗಿ ದಾಳಿ ಶಂಕೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here