ಗುಂಪುಗೂಡಿ ಕ್ರಿಕೆಟ್ ಆಡುವವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ!

0
278
Tap to know MORE!

ಉಡುಪಿ: ಕೊರೋನಾ ಲಾಕ್ ಡೌನ್ ಸಂದರ್ಭ ಯುವಕರು ಗುಂಪುಗೂಡಿ ಕ್ರಿಕೆಟ್ ಆಡುವುದು ಕಂಡು ಬರುತ್ತಿದೆ.ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ

ಈ ಕುರಿತು ವೀಡಿಯೋ ಸಂದೇಶದ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾ ಸಂಕಷ್ಟ ಕಾಲದಲ್ಲೂ ಸಹ ಗ್ರೌಂಡ್ನಲ್ಲಿ ಕೆಲವರು ಕ್ರಿಕೆಟ್ ಆಡುತ್ತಿದ್ದಾರೆ.ಹೀಗೆ ಗುಂಪು ಗೂಡಿ ಕ್ರಿಕೆಟ್ ಆಡುವುದನ್ನು ಜಿಲ್ಲೆಯಾದ್ಯಂತ ಗಮನಿಸಿದ್ದೇನೆ.

ಲೈನ್ ಮ್ಯಾನ್‌ಗಳಿಗೆ ಶಾಪ ಹಾಕುವ ಮುನ್ನ…

ಈಗಾಗಲೇ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮಾತನಾಡಿದ್ದು,ಈ ರೀತಿ ಗ್ರೂಪ್ ನಲ್ಲಿ ಕ್ರಿಕೆಟ್ ಆಡುವುದು ಕಂಡು ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.ದಯವಿಟ್ಟು ಇಂತಹ ಕ್ರಿಕೆಟ್ ಆಡುವ ಮೂಲಕ ಕಾನೂನು ಉಲ್ಲಂಘನೆ ಮಾಡಬೇಡಿ ಎಂದುಉಡುಪಿ ಡಿಸಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here