ಗುರುಪುರದಲ್ಲಿ ನೂತನ ಸೇತುವೆ ಉದ್ಘಾಟನೆ

0
177
Tap to know MORE!

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭಾರತ್ ವೈ ಶೆಟ್ಟಿ ಅವರು ಗುರುಪುರದಲ್ಲಿ ಫಾಲ್ಗುಣಿ ನದಿಗೆ ಅಡ್ಡಲಾಗಿ ಹೊಸದಾಗಿ ನಿರ್ಮಿಸಲಾದ ಗುರುಪುರ ಸೇತುವೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, “175 ಮೀಟರ್ ಉದ್ದದ ಗುರುಪುರ ಸೇತುವೆಯು ಎರಡು ವರ್ಷಗಳಲ್ಲಿ ಪೂರ್ಣಗೊಂಡಿದೆ. ಇಷ್ಟು ವೇಗದಲ್ಲಿ ಒಂದು ಸೇತುವೆ ಹಿಂದೆಂದೂ ನಿರ್ಮಾಣಗೊಂಡಿರಲಿಲ್ಲ ಎಂದು ನಾನು ಖುಷಿಪಟ್ಟಿದ್ದೇನೆ. ಟೆಂಡರ್ ನಿಯಮಗಳ ಪ್ರಕಾರ, ಸೇತುವೆಯನ್ನು ಪೂರ್ಣಗೊಳಿಸಲು ಎರಡು ವರ್ಷಗಳ ಸಮಯವನ್ನು  ನೀಡಲಾಗಿತ್ತು. ಆದರೆ ಇದು ಕೇವಲ 16 ತಿಂಗಳಲ್ಲಿ ಪೂರ್ಣಗೊಂಡಿದೆ” ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, “ಮುಗ್ರೊಡಿ ಕಂಸ್ಟ್ರಕ್ಷನ್ಸ್ ಗೆ ನಾನು ಕೃತಜ್ಞನಾಗಿದ್ದೇನೆ. ಒಪ್ಪಂದ ಮಾಡಿದಂತೆ, ದಾಖಲೆ ಸಮಯದಲ್ಲಿ ಸೇತುವೆ ಪೂರ್ಣಗೊಂಡಿದೆ. ಇಲ್ಲಿ ಹೊಸ ಸೇತುವೆ ಬಹುಕಾಲದಿಂದ ಬಾಕಿ ಉಳಿದಿದೆ. ಮುಲಾರ್ಪಟ್ನಾ ಸೇತುವೆ ಕುಸಿದಾಗ, ಹಳೆಯ ಗುರುಪುರ ಸೇತುವೆಯನ್ನು ಬದಲಾಯಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿತ್ತು ಮತ್ತು 39.42 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು . ಸುಧಾಕರ್ ಶೆಟ್ಟಿ ನೇತೃತ್ವದ ಮುಗ್ರೊಡಿ ಕಂಸ್ಟ್ರಕ್ಷನ್ಸ್ ಗುಣಮಟ್ಟದ ಕೆಲಸ ಮತ್ತು ಸಮಯೋಚಿತ ನಿರ್ಮಾಣದ ವಿಷಯದಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ “ಎಂದು ಅವರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 169 ರಲ್ಲಿರುವ ಈ ಸೇತುವೆ ಮಂಗಳೂರು ನಗರದಿಂದ 17 ಕಿ.ಮೀ ದೂರದಲ್ಲಿದೆ. ಸೇತುವೆಗೆ ಅಡಿಪಾಯವನ್ನು 2019 ರ ಫೆಬ್ರವರಿಯಲ್ಲಿ ಹಾಕಲಾಗಿತ್ತು. ಕಾಮಗಾರಿಗಳನ್ನು ಪೂರ್ಣಗೊಳಿಸಲು ಫೆಬ್ರವರಿ 2021 ರವರೆಗೆ ಗುತ್ತಿಗೆದಾರರಿಗೆ ಸಮಯ ನೀಡಲಾಗಿತ್ತು.  ಹಳೆಯ ಸೇತುವೆಯನ್ನು 1923 ರಲ್ಲಿ ನಿರ್ಮಿಸಲಾಖ
ಗಿತ್ತು ಮತ್ತು ಕಳೆದ 10 ರಿಂದ 15 ವರ್ಷಗಳಿಂದ ಇದು ದುರ್ಬಲವಾಗಿತ್ತು.

ಸಾಮಾಜಿಕ ಅಂತರವನ್ನು ಮರೆತ ಸಂಸದರು, ಮಾಧ್ಯಮ ಪ್ರತಿನಿಧಿಗಳು!

ಇಂದು ಬೆಳಿಗ್ಗೆ ನೆರವೇರಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗಿಯಾಗಿದ್ದರು. ಅದಲ್ಲದೆ ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮರೆತರು. ಜಿಲ್ಲೆಯ ಸಂಸದರು ನೆಪ ಮಾತ್ರಕ್ಕೆ ಮಾಸ್ಕ್ ಧರಿಸಿದಂತೆ ಕಂಡರು. ಆ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊರೊನಾ ಲಾಕ್ ಡೌನ್ ಸಡಿಲಿಕೆಯ ಸಂದರ್ಭ ಸರ್ಕಾರ ಹಾಗೂ ಜಿಲ್ಲಾಡಳಿತ ಕೆಲವು ನಿಯಮಾವಳಿಗಳನ್ನು ವಿಧಿಸಿತ್ತು. ಆದರೆ ಇವೆಲ್ಲವೂ ಜನಸಾಮಾನ್ಯರಿಗೆ ಮಾತ್ರವೇ ಅನ್ನೋದು ಜನರ ಪ್ರಶ್ನೆ. ಯಾಕೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕವಾಗಿ ಸಭೆ, ಸಮಾರಂಭ ಹಮ್ಮಿಕೊಳ್ಳಬಾರದು ಎಂಬ ನಿಯಮಗಳಿದ್ದರೂ ನೂರಾರು ಮಂದಿಯನ್ನು ಹೇಗೆ ಸೇರಿಸಲಾಯಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆವರೊಂದಿಗೆ ಮಾಧ್ಯಮದವರೂ ಸಹ ಫೊಟೋ ತೆಗೆಯಲು ಗುಂಪಿನಲ್ಲಿ ಹೋಗುವ ಚಿತ್ರ ತೆಗಳಿಕೆಗೆ ಕಾರಣವಾಗಿದೆ. ಹೀಗಾದರೆ ಜನರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ ಎನ್ನುವ ಪ್ರಶ್ನೆಗೆ ಜನನಾಯಕರೇ ಉತ್ತರಿಸಬೇಕಿದೆ.

ಫೋಟೋ ತೆಗೆಯಲು ಮುಗಿಬಿದ್ದ ಪತ್ರಕರ್ತ ಮಿತ್ರರು

LEAVE A REPLY

Please enter your comment!
Please enter your name here