ಗುರುಪುರದಲ್ಲಿ ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ಮಕ್ಕಳು ಸಾವು!

2
173
Tap to know MORE!

ಇಂದು ಬೆಳಗ್ಗೆ ಗುರುಪುರದ ಬಂಗ್ಲಗುಡ್ಡೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಹಲವಾರು ಕುಟುಂಬಗಳು ಅಪಾಯಕ್ಕೆ ಸಿಲುಕಿತ್ತು. ಸುತ್ತಮುತ್ತಲಿನ ಕೆಲವು ಮನೆಗಳನ್ನು ಸಮಾಧಿ ಮಾಡಿತ್ತು. ಅದರಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಸಿಲುಕಿ ಬಿದ್ದಿದ್ದಾರೆ ಎಂಬ ಆತಂಕದಿಂದ ಶೀಘ್ರವಾಗಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.

ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಸುಮಾರು 3 ಘಂಟೆಗಳ ಕಾಲ, ಸ್ಥಳೀಯರಲ್ಲದೆ ಇತರ ರಕ್ಷಣಾ ಪಡೆಗಳಿಂದ ಹುಡುಕಾಟ ನಡೆದಿತ್ತು. ಸಂಜೆ 5 ಗಂಟೆಯ ಸುಮಾರಿಗೆ, 10 ವರ್ಷದ ಬಾಲಕಿ ಮತ್ತು 13 ವರ್ಷದ ಬಾಲಕನ ದೇಹಗಳು ಸುಮಾರು 30 ಅಡಿ ಕೆಳಗೆ ಪ್ರಜ್ಞಾಹೀನ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

2 COMMENTS

LEAVE A REPLY

Please enter your comment!
Please enter your name here