ಗುರು

0
236
Tap to know MORE!

ಜ್ಞಾನವೆಂಬ ಜ್ಯೋತಿ ಯ ಬೆಳಗಿದವರು
ಅಜ್ಞಾನವೆಂಬ ಕತ್ತಲನ್ನು ದೂರ ಮಾಡಿದವರು
ಜೀವನಕ್ಕೆ ಅರ್ಥ ಕೊಟ್ಟ ಮಹಾ ಸಾಧಕರು
ಶಿಷ್ಯರ ಸಾಧನೆ ಎನ್ನ ಸಾಧನೆ ಎಂದರಿತವರು

ತಪ್ಪಿಗೆ ತಕ್ಕ ಪೆಟ್ಟಿನ ರುಚಿ
ಸಾಧನೆಗೆ ಬೆನ್ನುತಟ್ಟಿದ ಸವಿರುಚಿ
ಇಂದು ನೆನಪು ಆ ಗಳಿಗೆ
ಎಂದೆಂದೂ ಪಾಠ ಅದು ಬಾಳಿಗೆ

ಅರ್ಥ ಹೇಳಿಕೊಟ್ಟ ಸಮರ್ಥ
ಅದುವೇ ಗುರುವಿನ ಸಾಮರ್ಥ್ಯ
ಮನದ ಗೊಂದಲದ ಮಾಡುವರು ಇತ್ಯರ್ಥ
ಗುರುವಿಲ್ಲದ ಬಾಳು ಅಸಮರ್ಥ

ಹಿಂದೆ ಗುರು ಮುಂದೆ ಗುರಿ
ಇದ್ದರೆ ಮುಟ್ಟಬಹುದು ಯಾವುದೇ ಗುರಿ
ಗುರುವಿಗೆ ಗುಲಾಮನಾದರೆ ಜೀವನ
ಆಗ ಜೀವನವೇ ಪಾವನ

ಶಿಸ್ತಿನ ಅರ್ಥ ಜೀವನದಲ್ಲಿ ತಿಳಿಸಿ
ಚಲವನ್ನು ಮನದಲ್ಲಿ ಬೆಳೆಸಿ
ಶಿಷ್ಯರ ಪ್ರೀತಿಯನ್ನು ಗಳಿಸಿ
ಇಂದು ಇಂದು ಮುಂದು ನಮ್ಮ ಹರಸಿ

ಗಿರೀಶ್ ಪಿ.ಎಂ

ವಿವಿ ಕಾಲೇಜು, ಮಂಗಳೂರು

LEAVE A REPLY

Please enter your comment!
Please enter your name here