ಗೂಗಲ್ ಪೇ ಬಳಕೆದಾರರು ಈ ಮೊದಲು ಬ್ಯಾಂಕ್ ಖಾತೆಯಿಂದ ಮಾತ್ರವೇ ವಿವಿಧ ಬಗೆಯ ಡಿಜಿಟಲ್ ವ್ಯವಹಾರವನ್ನು ಮಾಡಬೇಕಾಗಿತ್ತು. ತಮ್ಮ ಖಾತೆಯಲ್ಲಿ ಹಣವಿದ್ದರೇ ಮಾತ್ರವೇ ಸಂದಾಯಕ್ಕೆ ಗೂಗಲ್ ಪೇ ಮೂಲಕ ಅವಕಾಶವಿತ್ತು. ಅದರ ಹೊರತಾಗಿ ಕ್ರೆಡಿಟ್ ಕಾರ್ಡ್ ಮೂಲಕ ಪೇ ಮಾಡಲು ಆಗುತ್ತಿರಲಿಲ್ಲ.
ಇದೀಗ ಗೂಗಲ್ ಪೇ ತನ್ನ ಗ್ರಾಹಕರಿಗೆ ಹೊಸ ಅವಕಾಶವೊಂದನ್ನು ನೀಡಿದ್ದು, ಕ್ರೆಡಿಟ್ ಕಾರ್ಡ್ ಮೂಲಕವೂ ವಿವಿಧ ಬಗೆಯ ಹಣ ವರ್ಗಾವಣೆಗೆ ಅವಕಾಶ ನೀಡಿದೆ. ಕ್ರೆಡಿಟ್ ಕಾರ್ಡ್ ಅನ್ನು ಗೂಗಲ್ ಪೇಗೆ ಲಿಂಕ್ ಮಾಡಿದ ನಂತ್ರ ಗೂಗಲ್ ಪೇ ನಲ್ಲಿ ನೀಡುವಂತ ಕರೆಂಟ್ ಬಿಲ್, ಗ್ಯಾಸ್ ಬಿಲ್, ಇನ್ಸೂರೆನ್ಸ್ ಸೇರಿದಂತೆ ವಿವಿಧ ಸೇವಾ ಸೌಲಭ್ಯಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಗೂಗಲ್ ಪೇ ಸದ್ಯಕ್ಕೆ ಎಕ್ಸಿಸ್ ವೀಸಾ ಕ್ರೆಡಿಟ್ ಕಾರ್ಡ್, ಎಕ್ಸಿಸ್ ಡೆಬಿಟ್ ಕಾರ್ ಮತ್ತು ಎಸ್ ಬಿ ಐ ವೀಸಾ ಕ್ರೆಡಿಟ್ ಕಾರ್ಡ್ ಗಳನ್ನು ಮಾತ್ರವೇ ಲಿಂಕ್ ಮಾಡಲು ಅವಕಾಶ ನೀಡಿದೆ. ಅದರ ಹೊರತಾಗಿ ಇತರೆ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಆಡ್ ಮಾಡೋದಕ್ಕೆ ಅವಕಾಶ ನೀಡಿಲ್ಲ.