ಗೂಗಲ್ ಪ್ಲೇ ಸ್ಟೋರ್ ನಿಂದ 38 ಆ್ಯಪ್‌ ಕಂಪ್ಲೀಟ್ ಔಟ್

0
198
Tap to know MORE!

ನಿಮಗೆ ದಿನಕ್ಕೊಂದು ಫೋಟೋ ತೆಗೆಯುವ ಹುಚ್ಚು ಇದೆಯಾ? ಫೋಟೋ ತೆಗೆಯಲು ವಿಶೇಷ ಆ್ಯಪ್‌ ಬಳಸುತ್ತಿದ್ದೀರ? ಹಾಗಿದ್ರೆ ಈ ವಿಷಯವನ್ನು ನೀವೊಮ್ಮೆ ಓದಲೇ ಬೇಕು. ಅದೇನೆಂದರೆ ಪ್ಲೇ ಸ್ಟೋರ್ ನಿಂದ 38 ಅಂಡ್ರಾಯ್ಡ್ ಆ್ಯಪ್‌ ಗಳನ್ನು ಗೂಗಲ್ ತೆಗೆದು ಹಾಕಿದೆ. ಅವೆಲ್ಲವೂ ಫೋಟೋ ಕ್ಲಿಕ್ಕಿಸುವ ಮತ್ತು ಎಡಿಟಿಂಗ್ ಹಾಗೂ ಕೊಲಾಜ್  ಮಾಡುವುದಕ್ಕೆ ಸಂಬಂಧಿಸಿದ ಅಪ್ಲಿಕೇಶನ್ ಗಳು. ಹಾಗೆಯೇ ಈ ಆ್ಯಪ್‌ ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ಕೂಡಲೇ ಅನ್ ಇನ್ಸ್ಟಾಲ್ ಮಾಡಿ ಎಂದು ಸೆಕ್ಯೂರಿಟಿ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ನಿಷೇಧಿಸಿರುವ ಪ್ರಮುಖ ಆ್ಯಪ್‌ ಗಳು :

ಲೈಟ್ ಬ್ಯೂಟಿ ಕ್ಯಾಮೆರಾ, ಬ್ಯೂಟಿ ಕೊಲಾಜ್ ಲೈಟ್, ಗ್ರೇಟ್ ಬ್ಯೂಟಿ ಕ್ಯಾಮೆರಾ, ಕವೂನ್ ಫೋಟೋ ಎಡಿಟರ್, ಬೆಂದು ಸೆಲ್ಫಿ ಬ್ಯೂಟಿ ಕ್ಯಾಮೆರಾ, ಪಿನಟ್ ಸೆಲ್ಫಿ ಬ್ಯೂಟಿ ಕ್ಯಾಮೆರಾ, ರೋಸ್ ಫೋಟೋ ಎಡಿಟರ್, ಸನ್ ಪ್ರೊ ಬ್ಯೂಟಿ ಕ್ಯಾಮೆರಾ, ಲಿಟಲ್ ಬೀ ಬ್ಯೂಟಿ ಕ್ಯಾಮೆರಾ ಇತ್ಯಾದಿ.. ಅಪ್ಲಿಕೇಶನ್ ಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡಿ

ಈ ಅಪ್ಲಿಕೇಶನ್ ಗಳು ಅನಗತ್ಯವಾಗಿರುವ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದವು.  ಬಳಕೆದಾರರು ಲಿಂಕ್ ಒತ್ತದಿದ್ದರು ಬ್ರೌಸರ್ ಗೆ ಅಕ್ರಮ ಪ್ರವೇಶ ಮಾಡುತ್ತಿದ್ದವು. ಬಳಕೆದಾರರ ಅನುಮತಿಯಿಲ್ಲದೆ ನೇರವಾಗಿ ಫೋನ್ ಮಾಹಿತಿಗಳನ್ನು ತೆಗೆದುಕೊಳ್ಳುತ್ತಿದ್ದವು. ಈ ಅಪ್ಲಿಕೇಶನ್ ಗಳು 2019ರ ಜನವರಿಯ ನಂತರ ಅಪ್ಲೋಡ್ ಆಗಿದ್ದು, 2 ಕೋಟಿಗೂ ಅಧಿಕ ಡೌನ್ಲೋಡ್ ಆಗಿದೆ. ಯುವಜನರು ಅದರಲ್ಲೂ ಯುವತಿಯರು ಈಗಲೂ ಈ ಆ್ಯಪ್‌ ಗಳನ್ನು ಬಳಸುತ್ತಿದ್ದಾರೆ.

LEAVE A REPLY

Please enter your comment!
Please enter your name here