ಗೂಗಲ್ ಫೋಟೋಸ್ – ಡ್ರೈವ್ ಬಳಕೆದಾರರ ಗಮನಕ್ಕೆ: ಜೂನ್ 1 ರಿಂದ ಉಚಿತ ಅನಿಯಮಿತ ಸ್ಟೋರೇಜ್‌ ಲಭ್ಯವಿರಲ್ಲ!

0
114
Tap to know MORE!

ವರದಿ: ಸಿದ್ಧಾರ್ಥ್ ಎಸ್. ಗೋಕಾಕ್

ಗೂಗಲ್ ಫೋಟೋಸ್ ಸ್ಟೋರೇಜ್ ಅಪ್ಲಿಕೇಶನ್ ಉಚಿತವಾಗಿದ್ದು ಈಗ ಜೂನ್ 1ರಿಂದ ಹಣ ಪಾವತಿಸಬೇಕಾಗುತ್ತದೆ. ಏಕೆಂದರೆ ಹೈ ಕ್ವಾಲಿಟಿ ಫೋಟೋಸ್ ಮತ್ತು ವೀಡಿಯೋಸಗಳ ಬ್ಯಾಕ್ಅಪ್ ಆಗುವ ಜಿ-ಮೇಲ್ ಅಪ್ಲಿಕೇಶನ್ ಲೋಡ್ ಉಳಿಸಿಕೊಳ್ಳಲು, ಸಿಗುತ್ತಿದ್ದ ಸ್ಟೋರೇಜ್ ಹಣ ಪಾವತಿಸಲಾಗುವುದು. ಇಷ್ಟು ದಿನ ಅಸಂಖ್ಯಾತ ಗಾತ್ರದ ಸ್ಟೋರೇಜ್‌ಗೆ ಅವಕಾಶವಿತ್ತು. ಇನ್ನು ಮುಂದೆ ಬ್ಯಾಕ್ಅಪ್ ಆಗುವ ಫೋಟೋಸ್ ಮತ್ತು ವೀಡಿಯೋಸ್ ಗಳು 15 ಜಿಬಿ ಡೇಟಾ ಅವಕಾಶ ಹೊಂದಿರಬೇಕು. 15 ಜಿಬಿ ತುಂಬಿದರೆ, ಬಳಿಕ ಸೇವೆಯನ್ನು ಮುಂದುವರೆಸಲು ಹಣ ಪಾವತಿ ಮಾಡಬೇಕು.

15 ಜಿಬಿ ವರೆಗೆ ಗೂಗಲ್ ಫೋಟೋಸ್ ನಲ್ಲಿ ಅಪ್ ಲೋಡ್ ಮಾಡಬಹುದು. ಅಸಲಿ ಫೋಟೋ 16 ಎಂಪಿಗಿಂತ ಜಾಸ್ತಿಯಿದ್ದರೆ, ಅದು ಅಪ್‌ಲೋಡ್ ಆಗುವುದಿಲ್ಲ.

ಇನ್ನು ಮುಂದೆ ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿಯೂ ಪಡೆಯಬಹುದು!

ಸ್ಟೋರೇಜ್ ಸ್ಪೇಸ್ ಖಾಲಿಯಾದರೆ ಗೂಗಲ್ ಫೋಟೋಸ್ ನಲ್ಲಿ ಸ್ಟೋರೇಜ್ ಮ್ಯಾನೇಜ್ಮೆಂಟ್ ಸೆಕ್ಷನ್ ಹೋಗಿ, ಗೂಗಲ್ ಅಕೌಂಟ್ ದಲ್ಲಿ ಎಷ್ಟು ಸ್ಪೇಸ್ ಯಿದೆ ಅಂತ ನೋಡಬಹುದು. ಗೂಗಲ್ ಫೋಟೋಸ್ ಸ್ಟೋರೇಜ್ ನಲ್ಲಿ ಬ್ಲರ್ ಆಗಿರುವ ಫೋಟೋಗಳು, ಹೆಚ್ಚು ಸ್ಪೇಸ್ಸ ತಿನ್ನುವ ಫೈಲ್‌ಗಳ ಮಾಹಿತಿಗಳು ಸಿಗುತ್ತದೆ. ಅಗತ್ಯವಿಲ್ಲದ ಫೈಲ್ ಅಳಿಸಿ, ಸ್ಟೋರೇಜ್ ಸ್ಪೇಸ್ ಹೆಚ್ಚಿಸಬಹುದು. ಅದೇ ರೀತಿ ಕಂಪ್ಯೂಟರ್, ಲ್ಶಾಪ್‌ಟಾಪ, ಟ್ಯಾಬ್‌ಗಳಲ್ಲೂ ಉಳಿಸಬಹುದು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

15 ಜಿಬಿ ಸ್ಟೋರೇಜ್ ಸ್ಪೇಸ್ ತುಂಬಿದರೆ ನಂತರ, ಮುಂದೆ ಯಾವುದೇ ಫೈಲ್ ಗೂಗಲ್ ಡ್ರೈವ್/ಫೋಟೋಸ್‌ನಲ್ಲಿ ಬ್ಯಾಕ್ ಆಪ್ ಮಾಡಲಾಗುವುದಿಲ್ಲ. ಹೆಚ್ಚಿನ ಫೋಟೋ ಮತ್ತು ವಿಡಿಯೋಗಳನ್ನು ಗೂಗಲ್ ಫೋಟೋಸ್ ಅಕೌಂಟ್ಸ್ ನಲ್ಲಿ ಉಳಿಸಲಾಗುವುದಿಲ್ಲ. ಅದೇ ರೀತಿ ಜಿ-ಮೇಲ್ ಮೂಲಕ ಫೋಟೋಸ್ ಮತ್ತು ಸಂದೇಶಗಳು, ಫೋಟೋ ವಿಡಿಯೋಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗುವುದಿಲ್ಲ.

ಭಾರತದ ಹೊಸ ಐಟಿ ನಿಯಮಗಳನ್ನು ಪಾಲಿಸಲು ಗೂಗಲ್ ಬದ್ಧ: ಸಿಇಒ ಸುಂದರ್ ಪಿಚೈ

15 ಜಿಬಿ ತುಂಬಿದ ಬಳಿಕ ಗೂಗಲ್ ವನ್‌ಗೆ ಸಬ್‌ಸ್ಕ್ರೈಬ್ ಮಾಡಿಕೊಂಡು ಹೆಚ್ಚಿನ ಸ್ಪೇಸ್ ಕೊಂಡುಕೊಳ್ಳಬಹುದು. ಐಒಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಈ ಮೂರರಲ್ಲಿ ಯಾವುದಾದರೂ ಒಂದರ ಮೂಲಕ ಗೂಗಲ್ ವನ್ ಪ್ಲ್ಯಾನ್‌ಗೆ ಸಬ್ಸ್‌ಕ್ರೈಬ್ ಮಾಡಬಹುದು. ಗೂಗಲ್ ಒನಲ್ಲಿ ಮೂರು ವಿಧದ ಸೇವಾ ಶುಲ್ಕ ಗಳಿವೆ.

ತಿಂಗಳಿಗೆ ₹130 ಕಟ್ಟಿದರೆ 100 ಜಿಬಿ ಸ್ಟೋರೆಜ್ ಸ್ಪೇಸ್, ತಿಂಗಳಿಗೆ ₹210 ಕಟ್ಟಿದರೆ 200 ಜಿಬಿ ಸ್ಟೋರೆಜ್ ಸ್ಪೇಸ್ ಹಾಗೂ ತಿಂಗಳಿಗೆ ₹650 ಕ್ಕೆ 2 ಟಿಬಿ ಸ್ಟೋರೆಜ್ ಸ್ಪೇಸ್ ಸಿಗುತ್ತದೆ. ಒಂದು ಪ್ಲ್ಯಾನ್‌ಅನ್ನು 5 ಜನರೊಂದಿಗೆ ಹಂಚಿಕೊಳ್ಳಬಹುದು.

LEAVE A REPLY

Please enter your comment!
Please enter your name here