ಗೂಗಲ್ ಫೋಟೋಸ್ : ಮುಂದಿನ ವರ್ಷದಿಂದ ಉಚಿತ ಸೌಲಭ್ಯಕ್ಕೆ ಕಡಿವಾಣ!

0
111
Tap to know MORE!

೧. 15 ಜಿಬಿ ಗಿಂತಲೂ ಅಧಿಕವಾಗಿ ಗೂಗಲ್ ಫೋಟೋ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಲು ಬಯಸಿದರೆ ಕಟ್ಟಬೇಕು ಹಣ!

೨. ಗೂಗಲ್ ನ ಜೀಮೇಲ್, ಡ್ರೈವ್, ಫೋಟೋ ಅಪ್ಲಿಕೇಶನ್ ಎರಡು ವರ್ಷ ನಿಷ್ಕ್ರಿಯವಾದರೆ, ಅದರಲ್ಲಿರುವ ಎಲ್ಲಾ ಡೇಟಾಗಳನ್ನು ಗೂಗಲ್ ಅಳಿಸಿ ಹಾಕಬಹುದು!

ನವದೆಹಲಿ: ಉತ್ತಮ ಗುಣಮಟ್ಟದ ಫೋಟೋಗಳಿಗಾಗಿ ನೀವು Google ನ  Google photos ಅಪ್ಲಿಕೇಶನ್ ಬಳಸುತ್ತಿದ್ದರೆ, ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. 2021 ಜೂನ್ 1 ರಿಂದ ಗೂಗಲ್ ಫೋಟೋ ಸೇವೆ ಉಚಿತವಾಗಿರುವುದಿಲ್ಲ ಎಂದು ಗೂಗಲ್ ಸಂಸ್ಥೆಯು ಅಧಿಕೃತವಾಗಿ ಘೋಷಿಸಿದೆ.

ಪ್ರಸ್ತುತ ಯಾವುದೇ ಬಳಕೆದಾರರು ತಮ್ಮ ಅನಿಯಮಿತ ಫೋಟೋಗಳನ್ನು ಗೂಗಲ್ ಫೋಟೋಗಳಲ್ಲಿ ಇರಿಸಬಹುದು ಮತ್ತು ಇದಕ್ಕಾಗಿ ಕಂಪನಿಯು ಶುಲ್ಕ ವಿಧಿಸುವುತ್ತಿಲ್ಲ.

ಇದನ್ನೂ ಓದಿ: ಇನ್ನು ಮುಂದೆ ವಾಟ್ಸಾಪ್ ಮೂಲಕವೇ ಹಣವನ್ನು ಪಾವತಿಸಿ!

ಜೂನ್ 1 ರಿಂದ ಗೂಗಲ್ ಫೋಟೋಗೆ ಶುಲ್ಕ :

ಗೂಗಲ್ ಮುಂದಿನ ವರ್ಷದಿಂದ ತನ್ನ ಗೂಗಲ್ ಫೋಟೋ ಸೇವೆಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುವುದಾಗಿ ಘೋಷಿಸಿದೆ. ಜೂನ್ 1 ರ ಮೊದಲು 15 ಜಿಬಿ ಸಂಗ್ರಹಣೆಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಗೂಗಲ್‌ ಸ್ಪಷ್ಟಪಡಿಸಿದೆ. ಅಂದರೆ ಮುಂದಿನ ವರ್ಷದ ವೇಳೆಗೆ ಬಳಕೆದಾರರು ಮತ್ತೊಂದು ಕ್ಲೌಡ್ ಸೇವೆಗೆ ಸುಲಭವಾಗಿ ವಲಸೆ ಹೋಗಬಹುದು.

G-mail ಖಾತೆಗಳನ್ನು ಸಹ ಮುಚ್ಚಲಾಗುವುದು :
ಗೂಗಲ್ ತನ್ನ ಗ್ರಾಹಕರ ಖಾತೆಗಾಗಿ ಹೊಸ ನೀತಿಗಳನ್ನು ಪರಿಚಯಿಸುತ್ತಿದೆ. ಅದು ಮುಂದಿನ ವರ್ಷ ಜೂನ್ 1 ರಿಂದ ಜಾರಿಗೆ ಬರಲಿದೆ. ಅಲ್ಲದೆ ನೀವು ಎರಡು ವರ್ಷಗಳಿಂದ ಜಿಮೇಲ್, ಡ್ರೈವ್ ಅಥವಾ ಫೋಟೋದಲ್ಲಿ ನಿಷ್ಕ್ರಿಯರಾಗಿದ್ದರೆ, ನೀವು ನಿಷ್ಕ್ರಿಯವಾಗಿರುವ ಖಾತೆಗಳಿಂದ ಕಂಪನಿಯು ನಿಮ್ಮ ಎಲ್ಲಾ ವಿಷಯವನ್ನು ತೆಗೆದುಹಾಕಬಹುದು.

LEAVE A REPLY

Please enter your comment!
Please enter your name here