ಗೂಗಲ್ ಮೀಟ್ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್ಗಳನ್ನು ನಡೆಸುವ ಉಚಿತ ಸೌಲಭ್ಯವು ಸೆಪ್ಟೆಂಬರ್ 30ರಂದು ಕೊನೆಯಾಗಲಿದೆ. ಅಕ್ಟೋಬರ್ 1 ರಿಂದ ಗೂಗಲ್ ಮೀಟ್ ಫ್ರೀ ವರ್ಷನ್ನ ಅಡಿಯಲ್ಲಿ ನಡೆಸಲಾಗುವ ಸಭೆಗಳು, ವೆಬಿನಾರ್ಗಳು ಅಥವಾ ಆನ್ಲೈನ್ ತರಗತಿಗಳ ಕಾಲಾವಧಿ ಕೇವಲ 60 ನಿಮಿಷಕ್ಕೆ ಸೀಮಿತವಾಗಲಿವೆ.
ಈ ಹೊಸ ನಿಯಮವು “ಜಿ ಸೂಟ್” ಹಾಗೂ “ಜಿ ಸೂಟ್ ಫಾರ್ ಎಜುಕೇಷನ್” ಗ್ರಾಹಕರಿಗೂ ಅನ್ವಯವಾಗಲಿದೆ.
“ಜಿ ಸೂಟ್” ಹಾಗೂ “ಜಿ ಸೂಟ್ ಫಾರ್ ಎಜುಕೇಷನ್” ಸೌಲಭ್ಯಗಳನ್ನು ಪಡೆಯ ಬಯಸುವ ಯಾವುದೇ ಸಂಸ್ಥೆಯು ಮಾಸಿಕ ಅಂದಾಜು ₹1,800 ಗಳನ್ನು ನೀಡಿ ಚಂದಾದಾರರಾಗಬೇಕಿದೆ. ಆ ಸೌಲಭ್ಯಗಳಡಿ, ಏಕಕಾಲದಲ್ಲಿ 250 ಸಭಿಕರನ್ನು ಸೇರಿಸಿ ಆನ್ಲೈನ್ ಸಭೆ ನಡೆಸಲು, ಲೈವ್ ಸ್ಟ್ರೀಮಿಂಗ್ ಮೂಲಕ 1 ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
ಅದಲ್ಲದೆ, ಆನ್ಲೈನ್ ಸಭೆ, ವೆಬಿನಾರ್ ಅಥವಾ ತರಗತಿಗಳನ್ನು ಗೂಗಲ್ ಡ್ರೈವ್ನಲ್ಲಿ ಸಂರಕ್ಷಿಸಿಡುವ ಸೌಲಭ್ಯವೂ ದೊರಕಲಿದೆ. ಅದಲ್ಲದೆ, “ಜಿ ಸೂಟ್” ಹಾಗೂ “ಜಿ ಸೂಟ್ ಫಾರ್ ಎಜುಕೇಷನ್” ಬಳಸುವ ಸಂಸ್ಥೆಗಳಿಗೆ ಆನ್ಲೈನ್ನಲ್ಲಿ ಹಾಜರಾತಿ ವರದಿಯನ್ನು ತಯಾರಿಸುವ ವೈಶಿಷ್ಟ್ಯವನ್ನು ಸೇರಿಸಲು ಗೂಗಲ್ ಮೀಟ್ ಯೋಜಿಸುತ್ತಿದೆ.
ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ಬಳಕೆಯಾಗಿರುವ ಗೂಗಲ್ ಮೀಟ್ನಡಿ ಅನೇಕ ತರಗತಿಗಳು, ಸಭೆಗಳು, ವೆಬಿನಾರ್ಗಳು ಜರಗಿವೆ. ದಿನವೊಂದಕ್ಕೆ 1 ಕೋಟಿ ಜನ ಗೂಗಲ್ ಮೀಟ್ ಬಳಸುತ್ತಿದ್ದರೆಂದು ಏಪ್ರಿಲ್ನ ಅಂಕಿ-ಅಂಶಗಳು ತಿಳಿಸಿವೆ.