ಗೃಹಪ್ರವೇಶ ಮತ್ತು ತನ್ನ ೪೦ನೇ ಹುಟ್ಟು ಹಬ್ಬದ ಆಚರಣೆಯನ್ನು ತಪ್ಪಿಸಿಕೊಂಡಿದ್ದ ಹುತಾತ್ಮ ಸೈನಿಕ

0
176
Tap to know MORE!

ಭಾರತ-ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಕೆ ಪಝಾನಿಯವರು ಕೆಲವೇ ದಿನಗಳ ಹಿಂದೆಯಷ್ಟೇ ನಡೆದ ತನ್ನ ೪೦ನೇ ಹುಟ್ಟುಹಬ್ಬ ಮತ್ತು ಗೃಹಪ್ರವೇಶದ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದರು.

ಜೂನ್ 3 ರಂದು, ಅವರ ಕುಟುಂಬಸ್ಥರೆಲ್ಲರೂ, ಗೃಹಪ್ರವೇಶ ಕಾರ್ಯಕ್ರಮ ಮತ್ತು ಪಝಾನಿಯವರ 40 ನೇ ಹುಟ್ಟುಹಬ್ಬವನ್ನು ಆಚರಿಸಲು ನೆರೆದಿದ್ದರು.

ಈ ವರ್ಷದ ಜನವರಿಯಲ್ಲಿ ಸೈನಿಕನು ತಮಿಳುನಾಡಿನ ದಕ್ಷಿಣ ಜಿಲ್ಲೆಯ ರಾಮನಾಥಪುರಂನ ಕಡುಕ್ಕಲಿಯೂರಿನಲ್ಲಿರುವ ತನ್ನ ಮನೆಗೆ ಭೇಟಿ ನೀಡಿದ್ದ. ಅವರು ಕುಟುಂಬದ ಗೃಹಪ್ರವೇಶದ ಸಮಾರಂಭಕ್ಕೆ ಮರಳಲು ಯೋಜನೆಗಳನ್ನು ರೂಪಿಸಿದ್ದರು. ಆದರೆ ಜೂನ್ ಮೊದಲ ವಾರದಲ್ಲಿ ಮನೆಯವರು ಮಾಡಿದ ಕರೆಯಲ್ಲಿ, “ಗಡಿಯಲ್ಲಿ ಸಮಸ್ಯೆಗಳಿವೆ” ಎಂದು ಹೇಳಿದ್ದರು.

ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಂದು ಸೈನಿಕರ ರೂಢಿಯಂತೆ, ಸೈನ್ಯದ ಹವಿಲ್ದಾರ್ ಪಝಾನಿಯೂ ಸಹ, ಪೂರ್ವ ಲಡಾಕ್‌ನ ಕಣಿವೆಗಳಲ್ಲಿ ನಡೆಯುತ್ತಿರುವ ಘರ್ಷಣೆಯ ಬಗ್ಗೆ ತಮ್ಮ ಕುಟುಂಬಕ್ಕೆ ಬಹಳ ಕಡಿಮೆ ವಿಷಯಗಳನ್ನು ಬಹಿರಂಗಪಡಿಸಿದ್ದರು.

ಯಾವುದೇ ಸಮಯದಲ್ಲೂ, ಶೀಘ್ರವಾಗಿ ಮನೆಗೆ ಬರಲು ಸಾಧ್ಯವಿಲ್ಲ ಎಂದು ಪಝಾನಿ ತನಗೆ ಹೇಳಿದ್ದರು ಎಂದು ಅವರ ಪತ್ನಿ ವನತಿ ದೇವಿ ಹೇಳಿದ್ದಾರೆ.

“ಇಲ್ಲಿ ಕೆಲವು ಸಮಸ್ಯೆಯಾಗುತ್ತಿವೆ …” ಎಂದು ಮಾತ್ರ ಅವರು ತನಗೆ ತಿಳಿಸಿದ್ದರು ಎಂದರು

LEAVE A REPLY

Please enter your comment!
Please enter your name here