ಸಿರಿತನ ಕ್ಕಿಂತ ಜಾಸ್ತಿ ನನ್ನ ಗೆಳೆತನ
ಇಂದು ಎಂದು ಬಾರದು ಇದಕ್ಕೆ ಬಡತನ
ಗೆಳೆಯ ನೀ ಅರಿತೆ ನನ್ನ ಜೀವನ
ನಿನ್ನ ಗೆಳೆತನ ನನಗೆ ನವ ಸಿಂಚನ
ಸ್ನೇಹಕ್ಕೆ ನಿಂತರೆ ಸಾಹುಕಾರ
ಛಲ ಬಿಡದ ಚಲಗಾರ
ಇಲ್ಲವೇ ಇಲ್ಲ ನಿನಗೆ ಅಹಂಕಾರ
ನಿನ್ನ ಸ್ನೇಹವೇ ಒಂಥರ ಸುಂದರ
ನೋವೆಂಬ ಕತ್ತಲ ದೂರಮಾಡುವೆ
ನಲಿವೆಂಬ ಬೆಳಕ ನೀ ಸೂಸುವೆ
ಆತ್ಮಬಲ ತುಂಬಿದ ಜೊತೆಗಾರ
ಎಂದು ನಗುತ್ತಿರುವ ನನ್ನ ಸಹೋದರ
ನನ್ನ ನಿನ್ನ ಸ್ನೇಹಕೆ ಸಾಕ್ಷಿ ಹೊಳೆವ ಚಂದಿರ
ನಿನ್ನ ನನ್ನ ಪ್ರೀತಿಗೆ ಸಾಕ್ಷಿ ಬೆಳಗೋ ದಿನಕರ
ಅದು ಹಗಲಲ್ಲೂ ಬೆಳಗುವ ಸ್ನೇಹ
ಅದು ಇರುಳಲ್ಲು ಮಿನುಗುವ ಸ್ನೇಹ
ಅಣ್ಣತಮ್ಮ ಕೊಡದ ಪ್ರೀತಿ
ಅಕ್ಕ-ತಂಗಿ ಕೊಡದ ಸ್ನೇಹ
ನೀ ಕೊಟ್ಟಿರುವೆ ನನಗೆ
ನೀನೆಂದು ನನ್ನ ಮನದೊಳಗೆ