ಗೊರಕೆಯ ಕಿರಿಕಿರಿಗೆ ಇಲ್ಲೊಂದು ಉಪಾಯ

0
151
Tap to know MORE!

ಸಾಮಾನ್ಯವಾಗಿ ಗೊರಕೆ ಹೊಡಿಯುವುದು ಸಭ್ಯತನವಲ್ಲ ಎಂಬ ಯೋಚನೆ ಕೆಲವರಿಗಿರುತ್ತದೆ. ಇದು ಸಭ್ಯತನದ ಪ್ರಶ್ನೆಯಲ್ಲ ಬದಲಾಗಿ ಆರೋಗ್ಯದ ಒಂದು ಸಮಸ್ಯೆ ಎಂದು ತಿಳಿಯಬೇಕಾಗಿದೆ. ಗೊರಕೆ ಕಡಿಮೆ ಮಾಡುವ ಮೊದಲು ಗೊರಕೆ ಹೇಗೆ ಉಂಟಾಗುತ್ತದೆ ಎಂಬುದನ್ನು ಅರಿಯುವುದು ಉತ್ತಮ. ನಮ್ಮ ಮೂಗಿನ ಹಿಂದೆ ಮತ್ತು ಗಂಟಲ ಮೇಲ್ಭಾಗದ ರಚನೆಗಳು ತೆಳುವಾದ ಪಟ್ಟಿಯಂತಿರುತ್ತವೆ. ಎಚ್ಚರಿದ್ದಷ್ಟೂ ಹೊತ್ತು ಇವು ಸೆಳೆತದಲ್ಲಿದ್ದು ವಾಯುಮಾರ್ಗವನ್ನು ಸರಾಗವಾಗಿರಿಸಲು ನೆರವಾಗುತ್ತವೆ. ಆದರೆ ನಿದ್ದೆ ಬಂದ ಬಳಿಕ ಈ ರಚನೆಗಳು ನಿಯಂತ್ರಣಗಳನ್ನು ಕಳೆದುಕೊಂಡು ಸಡಿಲವಾಗುತ್ತದೆ. ಉಸಿರಾಟದ ಗಾಳಿ ಈ ಪಟ್ಟಿಗಳನ್ನು ಹಾದು ಹೋಗುವಾಗ ಸಡಿಲವಾಗಿದ್ದ ಇವು ಕಂಪಿಸುತ್ತವೆ. ಇದನ್ನೇ ಗೊರಕೆ ಎಂದು ಕರೆಯುತ್ತಾರೆ.

ಗೊರಕೆ ನಿವಾರಣೆಗೆ ಪುದಿನಾ ಎಣ್ಣೆಯನ್ನು ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಹಾಕಿ ರಾತ್ರಿ ಮಲಗುವ ಮೊದಲು ಬಾಯಿ ಮತ್ತು ಗಂಟಲು ಮುಕ್ಕಳಿಸಬೇಕು

ಅಥವಾ ಒಂದು ಚಮಚ ಜೇನನ್ನು ಬಿಸಿನೀರಿಗೆ ಹಾಕಿ ಪ್ರತಿದಿನವೂ ಮಲಗುವ ಮೊದಲು ಕುಡಿಯಬೇಕು.
ಮತ್ತೊಂದು ಪರಿಣಾಮಕಾರಿಯಾದ ಮಾರ್ಗವೆಂದರೆ ಹುಬ್ಬಿನ ಮೇಲೆ ಬೆರಳಿನ ಗಂಟುಗಳಿಂದ ಹೊರಮುಖವಾಗಿ ತಿಕ್ಕಿದರೆ ಗೊರಕೆಯಿಂದ ವಿಮುಖರಾಗಬಹುದು

LEAVE A REPLY

Please enter your comment!
Please enter your name here