ಗೌತಮ್ ಅದಾನಿ ಈಗ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ !

0
183
Tap to know MORE!

ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಚೀನಾದ ಜಾಂಗ್ ಶಾನ್ಷನ್ ಅವರನ್ನು ಹಿಂದಿಕ್ಕುವ ಮೂಲಕ ಎರಡನೇ ಸ್ಥಾನಕ್ಕೇರಿದ್ದಾರೆ.

ಗೌತಮ್ ಅದಾನಿಯ ನಿವ್ವಳ ಆಸ್ತಿ ಮೌಲ್ಯವು 67.6 ಬಿಲಿಯನ್ ಡಾಲರ್ ಆಗಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ಮತ್ತು ವಿಶ್ವದ 14ನೇ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಏಷ್ಯಾದ ನಂಬರ್ ಒನ್ ಶ್ರೀಮಂತನಾಗಿದ್ದು, ಅವರ ನಂತರದ ಸ್ಥಾನದಲ್ಲಿ ಗೌತಮ್ ಅದಾನಿ ಸ್ಥಾನ ಪಡೆದಿದ್ದಾರೆ. ಮುಕೇಶ್‌ ಅಂಬಾನಿ 76 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಮುಕೇಶ್ ಅಂಬಾನಿ ಪ್ರಸ್ತುತ ವಿಶ್ವದ 13ನೇ ಶ್ರೀಮಂತ ವ್ಯಕ್ತಿಯಾಗಿದ್ದು, ಈ ಮೂಲಕ ಗೌತಮ್ ಅದಾನಿಗಿಂತ ಒಂದು ಸ್ಥಾನ ಮುಂದಿದ್ದಾರೆ.ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್ ಸೂಚ್ಯಂಕದ ಮಾಹಿತಿಯಂತೆ ಅದಾನಿಯ ಸಂಪತ್ತು ಈ ವರ್ಷ ಸುಮಾರು 34 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಬರ್ನಾರ್ಡ್ ಅರ್ನಾಲ್ಟ್ ಮತ್ತು ಮಿರಿಯಮ್ ಅಡೆಲ್ಸನ್ ನಂತರ ಈ ವರ್ಷ ಅತಿ ಹೆಚ್ಚು ಸಂಪತ್ತು ಹೆಚ್ಚಿಸಿಕೊಂಡ ವ್ಯಕ್ತಿ ಇವರಾಗಿದ್ದಾರೆ. ಆದರೆ ಇದೇ ವೇಳೆಯಲ್ಲಿ ಚೀನಾದ ಬಿಲಿಯನೇರ್ ಜಾಂಗ್ ಶಾನ್ಷನ್ ಸಂಪತ್ತು 12 ಬಿಲಿಯನ್ ಡಾಲರ್ ಕಡಿಮೆಯಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here