ಗ್ರಾಮೀಣ ಕಾಮಗಾರಿಗಳಲ್ಲಿ ವಲಸಿಗರಿಗೆ ಊರಲ್ಲೇ ಕೆಲಸ ?

0
123
Tap to know MORE!

ನವದೆಹಲಿ: ವಲಸೆ ಕಾರ್ಮಿಕರನ್ನು ಅವರ ಊರಿಗೆ ಸೇರಿಸುವುದರೊಂದಿಗೆ ಅವರಿಗೆ ದುಡಿಯುವ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರಕಾರ ಯೋಜಿಸಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 70,000ಕಿ. ಮೀ ವರೆಗಿನ ರಸ್ತೆ ನಿರ್ಮಾಣ, ಬಡವರಿಗೆ ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ.
ಲಾಕ್ಡೌನ್ ನಿಂದಾಗಿ ನಿಂತಿದ್ದ ಕಾಮಗಾರಿಗಳನ್ನು ಪೂರ್ತಿಗೊಳಿಸುವ ಮತ್ತು ವಲಸೆ ಕಾರ್ಮಿಕರಿಗೆ ದುಡಿಮೆಗೆ ವ್ಯವಸ್ಥೆ ಕೊಡುವ ಎರಡೂ ಅನುಕೂಲಗಳು ಇದರಿಂದ ಆಗಲಿದೆ ಎಂದು ಸರಕಾರ ಆಲೋಚಿಸಿದೆ.

ಸರಕಾರದ ಬಳಿಯಿರುವ ಮಾಹಿತಿಯ ಪ್ರಕಾರ ಮೂರನೇ ಎರಡರಷ್ಟು ವಲಸೆ ಕಾರ್ಮಿಕರು ಈ ಕಾಮಗಾರಿಗಳಲ್ಲಿ ನೇರವಾಗಿ ಭಾಗವಹಿಸಬಹುದು. ಉಳಿದವರನ್ನು ಇತರ ಕಾಮಗಾರಿಗಳಲ್ಲಿ ಸಹಾಯಕರಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ವರ್ಷದಲ್ಲಿ 90 ರಿಂದ 95 ದಿನಗಳವರೆಗೆ ಕಾರ್ಮಿಕರಿಗೆ ಕೆಲಸ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here