ಗ್ರಾಹಕರ ಗಮನಕ್ಕೆ

0
168
Tap to know MORE!

ವ್ಯಾಪಾರ-ವ್ಯವಹಾರ ನಮ್ಮ ಜೀವನದ ಒಂದು ಮುಖ್ಯ ಭಾಗವೇ ಆಗಿದೆ ಅದು ಯಾವುದೇ ರೀತಿಯ ದಾಗಲಿ. ನಮ್ಮಲ್ಲಿ ಸಾಕಷ್ಟು ಭಿನ್ನತೆಯನ್ನು ಳ ವ್ಯಕ್ತಿಗಳು ಅವರವರಿಗೆ ಸೂಕ್ತವಾಗುವ ವಿಭಿನ್ನ ವ್ಯಕ್ತಿತ್ವ ಗಳು ಇವೆ. ಅದರಲ್ಲಿ ನಾನು ಒಬ್ಬಳು ನನಗೆ ಎಲ್ಲಾದರೂ ಹೊರಗೆ ಹೋದಾಗ ಸುಮ್ಮನೆ ನಿಲ್ಲಲು ಅಸಾಧ್ಯವೆನಿಸುತ್ತದೆ ಹಾಗಾಗಿ ಸುಮ್ಮನೆ ನನ್ನ ಸುತ್ತಮುತ್ತಲು ಕಣ್ಣಾಯಿಸುತ್ತಲೇ ಇರುವೆ. ಯಾವುದಾದರೂ ಫ್ಲೇಕ್ಸ್ ಹೋಲ್ಡಿಂಗ್ಸ್ ಅಥವಾ ಇನ್ಯಾವುದೋ ಖಾಸಗಿ ಕಂಪನಿಗಳ ಜಾಹೀರಾತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ಬಹಳಷ್ಟು ಜನ ಈ ಜಾಹಿರಾತುಗಳ ಕಡೆ ಗಮನ ಹರಿಸದೆ ಇರುವುದನ್ನು ಕೂಡ ನಾನು ಕಂಡಿದ್ದೇನೆ. ಬಹುಶಃ ಅವರಿಗೆ ಇದರ ಪ್ರಾಮುಖ್ಯತೆ ತಿಳಿದಿರುವುದಿಲ್ಲ ಮತ್ತು ಅದರಿಂದ ಆಗುವ ಲಾಭ ನಷ್ಟಗಳ ಬಗ್ಗೆ ಯಾವುದೇ ಯೋಚನೆ ಇರುವುದಿಲ್ಲ. ಜಾಹೀರಾತುಗಳು ಗ್ರಾಹಕರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಆದರೆ ಕೆಲವೊಮ್ಮೆ ಅದರಲ್ಲಿ ಸಾಕಷ್ಟು ಲೋಪದೋಷಗಳು ಇರುತ್ತವೆ. ಇದನ್ನು ಗ್ರಾಹಕರಾದ ನಾವು ಗಮನಿಸಿ ಮುಂದುವರೆದರೆ ಒಳ್ಳೆಯದು ಎಂಬುವುದು ನನ್ನ ಭಾವನೆ.

ಇನ್ನು ಇತ್ತೀಚಿಗೆ ಅಂಗಡಿಯೊಂದರ ಒಳಗಿನ ಫಲಕ( ಬೋರ್ಡ್) ನನ್ನ ಗಮನವನ್ನು ಸೆಳೆದಿದ್ದು. ಬಹುಶಃ ನಾನು ಬಾರ್ಗೇನ್ ಮಾಡದೆ ಗುರು ಕೇಳಿದಷ್ಟು ಹಣ ಕೊಟ್ಟ ಮೊದಲ ಅಂಗಡಿ ಇರಬೇಕು. ಕೇವಲ ಎರಡೇ ಸಾಲಿನಲ್ಲಿ ನಮ್ಮನ್ನು ಕ್ಲೀನ್ ಬೌಲ್ಡ್ ಮಾಡುವ ಶಕ್ತಿ ಈ ಫಲಕಕ್ಕಿದೆ. ಇಲ್ಲಿ ಮೆಚ್ಚಲೇಬೇಕಾದ ವಿಷಯ ಎಂದರೆ ಅಂಗಡಿಯ ಮಾಲೀಕನ ಯೋಚನಾಶಕ್ತಿ ಮತ್ತು ಬುದ್ಧಿವಂತಿಕೆ ಏಕೆಂದರೆ ಈ ಬೋರ್ಡ್ ಇದ್ದದ್ದು ಕ್ಯಾಶ್ ಕೌಂಟರ್ ನ ಹತ್ತಿರ. ಶಾಪಿಂಗ್ ಮುಗಿಸಿ ಕ್ಯಾಶ್ ಕೌಂಟರ್ನ ಬಳಿ ಬಂದ ಯಾರೊಬ್ಬರಿಗೂ ಬಾರ್ಗೇನ್ ಮಾಡಲು ಮನಸ್ಸಾಗುವುದಿಲ್ಲ ಅದಲ್ಲದೆ ಇದುಬಟ್ಟೆ ಅಂಗಡಿ ಹೆಚ್ಚಾಗಿ ಬರುವವರು ಮಹಿಳೆಯರು. ಅದೇ ಕಾರಣದಿಂದ ಬೋರ್ಡ್ ಇಟ್ಟಿರಲೂಬಹುದು. ಏನೇ ಆಗಲಿ, ನನ್ನ ಒಂದು ಲೈಕ್ ಅಂಗಡಿಗೆ ಮತ್ತು ಅಲ್ಲಿನ ಬೋರ್ಡಿಗೆ ಯಾವಾಗಲೂ ಇರುತ್ತದೆ. ಇನ್ನು ಬೋರ್ಡಲ್ಲಿ ಬರೆದಿದ್ದ ಸಾಲು ನಿಮಗೆ ಹೇಳಲೇಬೇಕು.
ಇದೇ ನೋಡಿ ಆ ಸಾಲು

ಕಸ್ಟಮರ್ ಇಸ್ ಎ ಕಿಂಗ್ ಅಂಡ್ ಕಿಂಗ್ ನೆವರ್ ಬಾರ್ಗೇನ್ಸ್.

ನಿಜ ಅಲ್ವಾ ಪ್ರತಿಯೊಬ್ಬ ಗ್ರಾಹಕನು ತನ್ನದೇ ಆದ ರಾಜ್ಯಕ್ಕೆ ರಾಜನೆ ಆಗಿರುತ್ತಾನೆ.

LEAVE A REPLY

Please enter your comment!
Please enter your name here