ಬಿಗ್ಬಾಸ್ ಖ್ಯಾತಿಯ ರ್ಯಾಪರ್ ಚಂದನ್ ಶೆಟ್ಟಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕಳೆದ ಬಾರಿ ದಸರಾ ಸಂಭ್ರಮದಲ್ಲಿ ನಿವೇದಿತಾ ಗೌಡರೊಂದಿಗೆ ವೇದಿಕೆಯಲ್ಲಿ ಕಾಣಿಸಿ ವಿವಾದ ಸೃಷ್ಟಿಸಿದ ಚಂದನ್, ಈಗ ಮಲೆ ಮಹದೇಶ್ವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ, ಕೋಲು ಮಂಡೆ ಜಂಗಮ ದೇವರು ಎಂಬ ರ್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಈ ಹಾಡಿನ ವಿಡಿಯೋದಲ್ಲಿ ಶರಣೆ ಸಂಕಮ್ಮ ಅವರ ಪಾತ್ರವನ್ನು ಅಶ್ಲೀಲ ರೀತಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಂದನ್ ಶೆಟ್ಟಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ : ಸಿನಿಮಾ ಶೂಟಿಂಗ್ಗೆ ಅನುಮತಿ – ಮಾರ್ಗಸೂಚಿಗಳು ಬಿಡುಗಡೆ
ಈ ಹಾಡು ಬಿಡುಗಡೆಯಾದ ಮೂರೇ ದಿನಗಳಲ್ಲಿ 30 ಲಕ್ಷ ವೀಕ್ಷಣೆ ಪಡೆದು ದಾಖಲೆ ಸೃಷ್ಟಿಸಿತ್ತು. ಈ ಕುರಿತು ಚಂದನ್ ಶೆಟ್ಟಿಯವರೇ ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು.
ಕೋಲುಮಂಡೆ ಹಾಡು ಬಿಡುಗಡೆಯಾದ ಮೂರು ದಿನದಲ್ಲಿ 30ಲಕ್ಷ (3M) ವೀಕ್ಷಣೆ ಪಡೆಯಲು ಕಾರಣರಾದ ತಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು .. ಉಘೇ ಮಾದೇಶ್ವರ 🙏🏻🥰 @aanandaaudio @lucky_photography143 #kolumande
Posted by Chandan Shetty on Monday, 24 August 2020
ಆದರೆ ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಭಕ್ತರ ಭಾವನೆಗೆ ಧಕ್ಕೆಯಾಗಿದ್ದರಿಂದ, ಅವರ ಆಕ್ರೋಶಕ್ಕೆ ಮಣಿದು ಹಾಡನ್ನು ಯೂಟ್ಯೂಬ್ ನಿಂದ ತೆಗೆಸಿದ್ದಾರೆ.
ಜಾನಪದಗೀತೆಯನ್ನು ಮೂಲ ದಾಟಿಗೆ ವಿರುದ್ದವಾಗಿ ಹಾಡಲಾಗಿದೆ ಎಂದೂ ಆರೋಪಿಸಲಾಗುತ್ತಿತ್ತು.
ಈ ವಿವಾದದ ಕುರಿತಾಗಿ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ಮಲೆ ಮಹದೇಶ್ವರ ಭಕ್ತರ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಹಾಡನ್ನು ಯೂಟ್ಯೂಬ್ನಿಂದ ಡಿಲೀಟ್ ಮಾಡಿಸಿದ್ದಾರೆ. ತಮ್ಮಿಂದ ತಪ್ಪಾಗಿದೆ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ ಗಾಯಕ.
ಯೂಟ್ಯೂಬ್ನಲ್ಲಿ ಚಂದನ್ ಶೆಟ್ಟಿಯವರೇ ಖುದ್ದಾಗಿ ವೀಡಿಯೋ ತೆಗಿಸಿದರೂ, ಬೇರೊಬ್ಬರು ಅದನ್ನು ಮರಳಿ ಹಂಚಿದ್ದಾರೆ.
ಯುವ ದಸರಾ ವೇದಿಕೆಯಲ್ಲಿ ನಿವೇದಿತಾ ಗೌಡ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡುವ ಮೂಲಕ ಚಂದನ್ ಶೆಟ್ಡಿ ವಿವಾದಕ್ಕೀಡಾಗಿದ್ದರು. ಯುವ ದಸರಾ ವೇದಿಕೆಯನ್ನು ಚಂದನ್ ಶೆಟ್ಟಿ ವೈಯಕ್ತಿಕ ಕೆಲಸಕ್ಕಾಗಿ ದುರ್ಬಳಕೆ ಮಾಡಿಕೊಂಡರು ಎಂದೂ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.
[…] ಇದನ್ನೂ ಓದಿ : ಕೋಲುಮಂಡೆ ಜಂಗಮ ದೇವ ಯೂಟ್ಯೂಬ್ನಿಂದ ಡಿಲೀ… […]