ನವದೆಹಲಿ, ಅ. 24– ಸುಪ್ರೀಂ ಕೋರ್ಟ್ ಅಣತಿಯಂತೆ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿನ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಿದೆ.ಈ
ಚಕ್ರಬಡ್ಡಿ ಮನ್ನಾದ ಒಟ್ಟು ಮೊತ್ತ 6,500 ಕೋಟಿ ರೂ ಆಗುತ್ತದೆಂಬ ಲೆಕ್ಕಾಚಾರ ಇದೆ. ಕೊರೋನಾ ವೈರಸ್ನಿಂದ ಸೃಷ್ಟಿಯಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ನೋಡಿ : ಆದಾಯ ತೆರಿಗೆ ಮರುಪಾವತಿ ಗಡುವು ವಿಸ್ತರಣೆ
ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ ಆರು ತಿಂಗಳ ಅವಧಿಯಲ್ಲಿನ ಎರಡು ಕೋಟಿ ರೂ ವರೆಗಿನ ಸಾಲಗಳಿಗೆ ಇದು ಅನ್ವಯವಾಗಲಿದೆ.
ಅದೇ ರೀತಿ ಮೊರಟೋರಿಯಮ್ ಸೌಲಭ್ಯದ ಆಯ್ಕೆ ಮಾಡದ ಸಾಲಗಳಿಗೂ ಇದೂ ಅನ್ವಯವಾಗುಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ, ಈ ಆರು ತಿಂಗಳ ಅವಧಿಯಲ್ಲಿ ಸಾಲಗಳ ಮೇಲಿನ ಬಡ್ಡಿಯನ್ನು ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ. ಚಕ್ರಬಡ್ಡಿ, ಅಂದರೆ ಬಡ್ಡಿಯ ಮೇಲಿನ ಬಡ್ಡಿ ಮಾತ್ರ ಮನ್ನಾ ಆಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮೊರಾಟೋರಿಯಮ್ ಅವಧಿಯಲ್ಲಿನ ಬಡ್ಡಿ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದ ಕೋರ್ಟ್, ಅಕ್ಟೋಬರ್ 14ರಂದು ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಕೇಂದ್ರಕ್ಕೆ ನಿರ್ದೇಶನ ನೀಡಿತು. ಜನರು ಸಂಕಷ್ಟದಲ್ಲಿದ್ದಾರೆ. ಆದಷ್ಟೂ ಬೇಗ ಬಡ್ಡಿ ಮನ್ನಾ ಮಾಡಲು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಚಕ್ರಬಡ್ಡಿ ಮನ್ನಾ ಮಾಡುವ ಮೂಲಕ ದಸರಾ ಉಡುಗೊರೆ ನೀಡಿದೆ.>