ಹಿರಿಯ ನಟ, ‘ಚಲ್ತೇ ಚಲ್ತೇ’ ಚಿತ್ರದ ಖ್ಯಾತಿಯ ವಿಶಾಲ್ ಆನಂದ್ ಬಹು ಕಾಲದ ಅನಾರೋಗ್ಯದಿಂದಾಗಿ ರವಿವಾರ ನಿಧನರಾದರು ಎಂದು ಸೋಮವಾರ ಅವರ ಕುಟುಂಬ ಸದಸ್ಯರು ಈ ವಿಚಾರವನ್ನು ತಿಳಿಸಿದ್ದಾರೆ.
82ನೇ ವಯಸ್ಸಿನಲ್ಲಿ ನಿಧನರಾಗಿರುವ ಆನಂದ್ ಅವರ ಮೂಲ ಹೆಸರು ಭಿಶಮ್ ಕೊಹ್ಲಿ. ‘ಹಿಂದೂಸ್ತಾನ್ ಕಿ ಕಸಮ್’, ‘ಟ್ಯಾಕ್ಸಿ ಡ್ರೈವರ್’ ಸಹಿತ 1970ರ ದಶಕದಲ್ಲಿ ಹಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿಮಿ ಗರೆವಾಲ್ ಕೂಡ ನಟಿಸಿದ್ದ ‘ಚಲ್ತೇ ಚಲ್ತೇ’ ಚಿತ್ರ ಆನಂದ್ ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.