ಚಾಮರಾಜನಗರ: ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರೋನಾ ಸೋಂಕಿತ ವ್ಯಕ್ತಿಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಚಾಮರಾಜನಗರ ಜಿಲ್ಲೆ ಇದೀಗ ಕರೋನಾ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.
ಮುಂಬೈನ ವೈದ್ಯಕೀಯ ವಿದ್ಯಾರ್ಥಿ, ರೋಗಿ ಸಂಖ್ಯೆ 5,919 , ಇಂದು ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಈತನು ತನ್ನ ತಾಯಿಯನ್ನು ಹನೂರು ತಾಲೂಕಿನ ಸೋದರ ಮಾವನ ಮನೆಗೆ ಬಿಡಲು ಬಂದಿದ್ದನು. ಈ ವೇಳೆ ಈತನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಇವರ ಸಂಪರ್ಕದಲ್ಲಿದ್ದ 24 ಜನರ ವರದಿಗಳೂ ನೆಗೆಟಿವ್ ಬಂದಿತ್ತು ಮತ್ತು ಸೋಂಕಿತನ ತಾಯಿ ಮತ್ತು ಸಹೋದರರ ವರದಿಯೂ ನೆಗೆಟಿವ್ ಬಂದಿದ್ದು, ಅವರೆಲ್ಲರನ್ನೂ ಕ್ವಾರಂಟೈನ್ ನಿಂಲ ಬಿಡುಗಡೆ ಮಾಡಲಾಗಿದೆ.
ಕೊರೋನಾ ರೋಗದ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾದ ಕರ್ನಾಟಕದ ಏಕೈಕ ಜಿಲ್ಲೆ ಚಾಮರಾಜನಗರ. ಜೂನ್ ಆರಂಭದವರೆಗೂ ಜಿಲ್ಲೆಯ ಯಾರೊಬ್ಬರಲ್ಲಿಯೂ ಸೋಂಕು ಕಾಣಿಸಿಕೊಂಡಿರಲಿಲ್ಲ.