ಚಾರ್ಜ್‌ಗೆ ಇಟ್ಟ ಮೊಬೈಲ್‌ಗೆ ಬೆಂಕಿ – ತಾಯಿ, ಮಕ್ಕಳು ಬಲಿ

0
186
Tap to know MORE!

ಬೆಂಕಿ ಅನಾಹುತದಲ್ಲಿ ತಾಯಿ ಮತ್ತು ಅವಳಿ ಮಕ್ಕಳು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕರೂರ್ ಎಂಬಲ್ಲಿ ನಡೆದಿದೆ. ವರದಿಗಳ ಪ್ರಕಾರ, ಚಾರ್ಜಿಂಗ್ ಇಟ್ಟ ಮೊಬೈಲ್ ನಿಂದ ಬೆಂಕಿ ಕಿಡಿ ಕಾಣಿಸಿಕೊಂಡಿದೆ. ತಾಯಿ ಸ್ಥಳದಲ್ಲೇ ಮೃತಪಟ್ಟರೆ, ಮಕ್ಕಳು ಆಸ್ಪತ್ರೆಗೆ ಹೋಗುವ ದಾರಿ ಮಧ್ಯದಲ್ಲಿ ಸಾವನಪ್ಪಿದ್ದಾರೆ.

ಸಾವನಪ್ಪಿದ 29 ವರ್ಷದ ಮುತ್ತುಲಕ್ಷ್ಮೀ ಅವರ 3 ವರ್ಷದ ಅವಳಿ ಗಂಡು ಮಕ್ಕಳೊಂದಿಗೆ ರಾಯನೂರು ಎಂಬಲ್ಲಿ ವಾಸಿಸುತ್ತಿದ್ದರು. 6 ವರ್ಷದ ಹಿಂದೆ ಆಕೆಗೆ ಮದುವೆಯಾಗಿದ್ದು 2 ವರ್ಷದ ಹಿಂದೆ ಕೌಟುಂಬಿಕ ಕಾರಣಕ್ಕಾಗಿ ಗಂಡನಿಂದ ಬೇರ್ಪಟ್ಟಿದ್ದರು. ಕುಟುಂಬಕ್ಕೆ ಯಾವುದೇ ಆದಾಯದ ಮೂಲ ಇಲ್ಲದೇ ಇದ್ದುದರಿಂದ ಮುತ್ತುಲಕ್ಷ್ಮೀ ತನ್ನ ಹೆತ್ತವರನ್ನು ಸಂಬಂಧಿಕರ ಮನೆಗೆ ಹಣ ತರಲೆಂದು ಕಳುಹಿಸಿದ್ದರು.

ಆದಿತ್ಯವಾರ ರಾತ್ರಿ ಮುತ್ತುಲಕ್ಷ್ಮೀ ಸೋಫಾದ ಮೇಲೆ ಮಲಗಿದ್ದು ಅಲ್ಲೇ ಪಕ್ಕದಲ್ಲಿ ಮೊಬೈಲ್ ಚಾರ್ಜ್ ಮಾಡಲು ಇಟ್ಟಿದ್ದರು. ಮುಂಜಾನೆ 6 ರ ಸುಮಾರಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಕ್ಕಪಕ್ಕದ ಮನೆಯವರು ಪ್ರಜ್ಞಾಹೀನ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಕ್ಕಳು ಮೃತರಾಗಿದ್ದರು. ಮುತ್ತುಲಕ್ಷ್ಮೀ ಸ್ಥಳದಲ್ಲೇ ಅಸುನೀಗಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಅಸ್ವಾಭಾವಿಕ ಮರಣ ಎಂದು ಎಫ್ ಐಆರ್ ದಾಖಲಿಸಿದ್ದಾರೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ

LEAVE A REPLY

Please enter your comment!
Please enter your name here