ಚಿತ್ರದುರ್ಗದ 96 ವರ್ಷದ ಸೋಂಕಿತೆ ಗುಣಮುಖ!

0
186
Tap to know MORE!

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ 96 ವರ್ಷದ ಮಹಿಳೆಯು, ಒಂಬತ್ತು ದಿನಗಳಲ್ಲಿ ಕೊರೋನವೈರಸ್‌ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

“ಚಿತ್ರದುರ್ಗ ಜಿಲ್ಲೆಯ ಹರಿಯೂರು ಮೂಲದ ಮಹಿಳೆಯಲ್ಲಿ ಜೂನ್ 27 ರಂದು ಕೊರೋನಾ ಸೋಂಕು ದೃಢಪಟ್ಟ ಕೂಡಲೆ, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಚೇತರಿಕೆ ಗಮನಾರ್ಹವಾಗಿದೆ ಮತ್ತು ಸೋಮವಾರ ಅವರನ್ನು ಬಿಡುಗಡೆ ಮಾಡಲಾಗಿದೆ” ಎಂದು ಚಿತ್ರದುರ್ಗ ಆರೋಗ್ಯ ಅಧಿಕಾರಿ ಎಂ.ಹನುಮಂತಪ್ಪ ಅವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

“ಮಹಿಳೆಯು ತನ್ನ ಪಟ್ಟಣದ 65 ವರ್ಷದ ವ್ಯಕ್ತಿಯಿಂದ ಈ ಸೋಂಕನ್ನು ತಗುಲಿಸಿಕೊಂಡಿದ್ದರು” ಎಂದು ಹನುಮಂತಪ್ಪ ಹೇಳಿದರು. ಆದರೆ ಅವರ ಹೆಸರನ್ನು ನೆನಪಿಸಿಕೊಳ್ಳಲಾಗಲಿಲ್ಲ.

ಜಿಲ್ಲೆಯಲ್ಲಿ ಇದುವರೆಗೆ 90 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇಲ್ಲಿಯವರೆಗೆ 52 ಸೋಂಕಿತರನ್ನು ಗುಣಪಡಿಸಿ ಬಿಡುಗಡೆ ಮಾಡಲಾಗಿದೆ. ಮಂಗಳವಾರದ ನಾಲ್ಕು ಸೇರಿದಂತೆ, 38 ಪ್ರಕರಣಗಳು ಸಕ್ರಿಯವಾಗಿದೆ ಮತ್ತು ಒಂದೇ ಒಂದು ಸಾವು ಸಂಭವಿಸಿಲ್ಲ.

LEAVE A REPLY

Please enter your comment!
Please enter your name here