ಅ.15 ರಿಂದ ಚಿತ್ರಮಂದಿರಗಳು ಓಪನ್ – ಬಿಡುಗಡೆಯಾಗುವ ಮೊದಲ ಚಿತ್ರ ಯಾವುದು?

0
114

ಅಕ್ಟೋಬರ್ 15 ರಂದು ಚಿತ್ರಮಂದಿರಗಳು ತೆರೆದ ಬಳಿಕ
ವಿವೇಕ್ ಒಬೆರಾಯ್ ಅಭಿನಯದ ಪಿಎಂ ನರೇಂದ್ರ ಮೋದಿಯವರ ಜೀವನಚರಿತ್ರೆ ಮರು ಬಿಡುಗಡೆಯಾಗಲಿದೆ. ಕೋವಿಡ್-19 ಭೀತಿಯಿಂದ ಜಾರಿಯಲ್ಲಿದ್ದ ಲಾಕ್‌ಡೌನ್, ತೆರವಾದ ಬಳಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿರುವ ಮೊದಲ ಚಿತ್ರ ಇದಾಗಲಿದೆ.

ಚಲನಚಿತ್ರ ವಿಮರ್ಶಕ ಮತ್ತು ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಇಂದು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ದೃ ದೃಢಪಡಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ವಿವೇಕ್ ಒಬೆರಾಯ್ ಅಭಿನಯದ ಪಿಎಂ ನರೇಂದ್ರ ಮೋದಿ ಚಿತ್ರದ ಪೋಸ್ಟರ್ ಅನ್ನು ಅವರು ಹಂಚಿಕೊಂಡಿದ್ದಾರೆ. “ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಮೊದಲ ಚಲನಚಿತ್ರ – #BeginAgain” ಎಂದು ಬರೆಯಲಾಗಿದೆ.

ಓಮುಂಗ್ ಕುಮಾರ್ ನಿರ್ದೇಶನದ ಪಿಎಂ ನರೇಂದ್ರ ಮೋದಿ ಚಿತ್ರ ಕಳೆದ ವರ್ಷ ಮೇ 24 ರಂದು ಮೊದಲ ಬಾರಿಗೆ ಬಿಡುಗಡೆಯಾಯಿತು. ಈ ಚಲನಚಿತ್ರವು ಪ್ರಧಾನಿ ಮೋದಿಯವರ ಬಡತನ ಮತ್ತು ರೈಲ್ವೆ ನಿಲ್ದಾಣದಲ್ಲಿ ಚಹಾವನ್ನು ಮಾರಾಟ ಮಾಡಿ, ಬಳಿಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕನಾಗುವುದನ್ನು ತೋರಿಸುತ್ತದೆ. ಈ ಚಿತ್ರದಲ್ಲಿ ಬೊಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣನ್, ಬರ್ಖಾ ಬಿಶ್ತ್, ರಾಜೇಂದ್ರ ಗುಪ್ತಾ ಮತ್ತು ಜರೀನಾ ವಹಾಬ್ ನಟಿಸಿದ್ದಾರೆ.

ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಪುನಃ ತೆರೆಯಲು ಸರ್ಕಾರ ಇತ್ತೀಚೆಗೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಹೊಸ ಅನ್ಲಾಕ್ 5 ಮಾರ್ಗಸೂಚಿಗಳ ಪ್ರಕಾರ, ಶೇ.50 ಆಸನ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here