ಚಿನ್ನದ ಬೆಲೆಯಲ್ಲಿ ಇಳಿಕೆ!

0
126

ನವದೆಹಲಿ: ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 54,870 ರೂಪಾಯಿಗಳಿಂದ 54,380 ರೂಪಾಯಿಗೆ ಇಳಿದಿದೆ. ಬೆಳ್ಳಿ ಕೆ.ಜಿ.ಗೆ 65,500 ರೂಪಾಯಿಗಳಿಂದ 65,550 ರೂಪಾಯಿ ಏರಿಕೆ ಕಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 49,850 ರೂಪಾಯಿಯಾಗಿದೆ. ಜಾಗತಿಕ ಮಾರುಕಟ್ಟೆಯು ದುರ್ಬಲವಾಗಿರುವುದು ಹಾಗೂ ರೂಪಾಯಿ ಬೆಲೆಯಲ್ಲಿ ಏರಿಳಿತವು ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ದೆಹಲಿ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ 210 ರೂಪಾಯಿ ಇಳಿಕೆ ಕಂಡಿದೆ.

ಇಂದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನಲ್ಲಿ ಅಕ್ಟೋಬರ್ ಚಿನ್ನದ ಬೆಲೆ ಶೇಕಡಾ 0.22 ರಷ್ಟು ಇಳಿದಿದ್ದು, 10 ಗ್ರಾಂ. ಬಂಗಾರದ ಬೆಲೆಯು 51,665 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ಶೇಕಡಾ 1 ರಷ್ಟು ಇಳಿಕೆ ಕಂಡಿದ್ದು, ಕೆ.ಜಿಗೆ 66,821 ರೂಪಾಯಿಯಾಗಿದೆ.

LEAVE A REPLY

Please enter your comment!
Please enter your name here