ಚೀನಾದಲ್ಲಿ ಉಯಿಘರ್ ಮುಸ್ಲಿಂ ಜನಸಂಖ್ಯೆ ನಿಗ್ರಹಕ್ಕೆ ಬಲವಂತದ ಗರ್ಭಪಾತ

0
185
Tap to know MORE!

ಬೀಜಿಂಗ್ : ದೇಶದಲ್ಲಿನ ಮುಸ್ಲಿಂ ಜನಸಂಖ್ಯೆಯನ್ನು ನಿಗ್ರಹಿಸುವ ವ್ಯಾಪಕ ಅಭಿಯಾನದ ಅಂಗವಾಗಿ ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಜನನದ ಪ್ರಮಾಣವನ್ನು ಕಡಿತಗೊಳಿಸಲು ಚೀನಾ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜತೆಗೆ ದೇಶದ ಬಹುಸಂಖ್ಯಾತ ಹ್ಯಾನ್ ಸಮುದಾಯದವರಿಗೆ ಹೆಚ್ಚಿನ ಮಕ್ಕಳನ್ನು ಹೊಂದಲು ಉತ್ತೇಜನ ನೀಡುತ್ತಿದೆ.

ಉಯಿಘರ್ ನ ಸ್ವಾಯತ್ತ ಪ್ರದೇಶವಾಗಿರುವ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಮಹಿಳೆಯರನ್ನು ನಿಯಮಿತವಾಗಿ ಗರ್ಭಧಾರಣೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅವರಿಗೆ ಗರ್ಭನಿರೋಧಕ ಬಳಸಲು ಆಗ್ರಹಿಸಲಾಗುತ್ತದೆ. ಸಂತಾನ ಶಕ್ತಿ ಹರಣ ಹಾಗೂ ಬಲವಂತದ ಗರ್ಭಪಾತಕ್ಕೆ ಒತ್ತಾಯಿಸಲಾಗಿತ್ತದೆ.

LEAVE A REPLY

Please enter your comment!
Please enter your name here