ಚೀನಾ ಉತ್ಪನ್ನಗಳಿಗೆ ಕಲರ್ ಕೋಡ್..!!

0
200
Tap to know MORE!

ಹೊಸದಿಲ್ಲಿ: ಚೀನಿ ವಸ್ತುಗಳ ಬಹಿಷ್ಕಾರ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ದೇಶಿ ಮತ್ತು ವಿದೇಶಿ ಉತ್ಪನ್ನಗಳನ್ನು ಪ್ರತ್ಯೇಕಿಸಲು ಉತ್ಪನ್ನಗಳ ಮೇಲೆ ಬಣ್ಣದ ಸಂಕೇತಗಳನ್ನು ನಮೂದಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರಿಗೆ ಚೀನಿ ವಸ್ತುಗಳನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭವಾಗಲಿದೆ.

ಕೇಂದ್ರ ಸರಕಾರವು ಇ – ಮಾರುಕಟ್ಟೆ ತಾಣದಲ್ಲಿ ಮಾರಟಗೊಳ್ಳುವ ಉತ್ಪನ್ನಗಳ ಮೂಲ ದೇಶಗಳನ್ನು ಸೂಚಿಸುವುದು ಕಡ್ಡಾಯ ಎಂದು ಆದೇಶಿಸಿದ ಬೆನ್ನಲ್ಲೇ ಕಲರ್ ಕೋಡ್ ಜಾರಿಗೆ ಮುಂದಾಗಿದೆ. ಇ- ಕಾಮರ್ಸ್ ವೇದಿಕೆಗೂ ಇದನ್ನು ಅಳವಡಿಸಲು ಡಿಪಿಐಐಟಿ ಪರಿಶೀಲಿಸುತ್ತಿದೆ. ಪ್ರಸ್ತುತ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಪೇಟಿಎಂ ನಲ್ಲಿ ಶೇ. 50 ರಷ್ಟು ದೇಶಿ ಉತ್ಪನ್ನಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಸರಕಾರ ಖಡಕ್ಕಾಗಿ ನಿರ್ದೇಶಿಸಿದೆ.

LEAVE A REPLY

Please enter your comment!
Please enter your name here