ಚೀನಾ ರಾಖಿಗಳಿಗೆ ಬಹಿಷ್ಕಾರ – ಅಂದಾಜು ₹4 ಸಾವಿರ ಕೋಟಿ ನಷ್ಟ

0
162
Tap to know MORE!

ನವದೆಹಲಿ: ಈ ವರ್ಷದ ರಾಖಿ ಹಬ್ಬದಂದು, ಚೀನಾ ನಿರ್ಮಿತ ರಾಖಿಗಳಿಗೆ ಭಾರಿ ಹೊಡೆತ ನೀಡಿದ್ದು, ಸುಮಾರು 4,000 ಕೋಟಿ ರೂ. ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜೂನ್ 10 ರಂದು, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ), ಈ ವರ್ಷ ರಕ್ಷಾ ಬಂಧನ ಹಬ್ಬವನ್ನು “ಹಿಂದೂಸ್ತಾನಿ ರಾಖಿ” ಎಂದು ಆಚರಿಸಲು ಕರೆ ನೀಡಿತ್ತು. ಇದೀಗ ಅದು ಯಶಸ್ವಿಯಾಗಿದೆ.

ಸಿಎಐಟಿಯ ಸಹಕಾರದೊಂದಿಗೆ ಸುಮಾರು 1 ಕೋಟಿಯಷ್ಟು ರಾಖಿಗಳನ್ನು, ಭಾರತೀಯ ಸರಕುಗಳನ್ನೇ ಬಳಸಿ ದೇಶಾದ್ಯಂತ ತಯಾರಿಸಲಾಗಿತ್ತು ಮತ್ತು ಇವುಗಳು ವಾಣಿಜ್ಯ ಕ್ಷೇತ್ರಗಳಲ್ಲಿ, ಮನೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಂದ ತಯಾರಿಸಲ್ಪಟ್ಟಿತು.

ವೈವಿಧ್ಯಮಯ, ಹೊಸ-ವಿನ್ಯಾಸಕ ರಾಖಿಗಳನ್ನು ಭಾರತೀಯ ಸರಕುಗಳಿಂದ ತಯಾರಿಸಲಾಗುತ್ತಿದೆ. ಈ ವರ್ಷ ಒಂದೇ ಒಂದು ರಾಖಿಯನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ, ಭಾರತವು ಚೀನಾ ಸಾಮಾಗ್ರಿಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಸಾಧ್ಯವಿಲ್ಲ ಎಂಬುದನ್ನು ಅಲ್ಲಗೆಳೆದಂತಾಗಿದೆ. ಭಾರತೀಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಮಾಡಬಹುದು!

ಸಿಎಐಟಿಯ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಮಾತನಾಡಿ, ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ ಸುಮಾರು 50 ಕೋಟಿ ರಾಖಿಗಳನ್ನು ಸುಮಾರು 6000 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ ಮತ್ತು ಕಳೆದ ಹಲವು ವರ್ಷಗಳಿಂದ ಚೀನಾ ನಿರ್ಮಿತ ರಾಖಿಗಳನ್ನೇ ಸುಮಾರು 4000 ಕೋಟಿ ರೂ.ಗಳಿಗೆ ಆಮದು ಮಾಡಲಾಗುತ್ತಿತ್ತು” ಎಂದರು.

ಚೀನಾದ ಸರಕುಗಳನ್ನು ಬಹಿಷ್ಕರಿಸುವ ಮುಂದಿನ ಹಂತದ ಬಗ್ಗೆ ಮಾತನಾಡಿದ ಭಾರ್ತಿಯಾ ಮತ್ತು ಖಂಡೇಲ್ವಾಲ್, ಆಗಸ್ಟ್ 9 ರಂದು ದೇಶಾದ್ಯಂತದ ವ್ಯಾಪಾರಿಗಳು “ಚೀನಾ ಕ್ವಿಟ್ ಇಂಡಿಯಾ” ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು.

ಈ ದಿನ, ವ್ಯಾಪಾರಿಗಳು ದೇಶಾದ್ಯಂತ 800 ಕ್ಕೂ ಹೆಚ್ಚು ಸ್ಥಳಗಳಲ್ಲಿ ಒಟ್ಟುಗೂಡಿ, ‘ಚೀನಾ ಕ್ವಿಟ್ ಇಂಡಿಯಾ’ ಎಂಬ ಘೋಷಣೆಯನ್ನು ಕೂಗುತ್ತಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here