ಚೀನಾ ವಿರುದ್ಧದ ಒಪ್ಪಂದವನ್ನು ರದ್ದುಗೊಳಿಸಲು ಮಹಾರಾಷ್ಟ್ರ ಸರ್ಕಾರವನ್ನು ಕೋರಿದ ಕಾಂಗ್ರೆಸ್ ಮುಖಂಡ

0
120
Tap to know MORE!

ಮಹಾರಾಷ್ಟ್ರ ಸರ್ಕಾರದ ಮಿತ್ರಪಕ್ಷವಾದ ಕಾಂಗ್ರೆಸ್ ಶುಕ್ರವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ರಾಜ್ಯದಲ್ಲಿ ವಾಹನ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಚೀನಾದ ಗ್ರೇಟ್ ವಾಲ್ ಮೋಟಾರ್ಸ್‌ನೊಂದಿಗೆ ಮಾಡಿದ್ದ ಶತಕೋಟಿ ಡಾಲರ್ ಒಪ್ಪಂದವನ್ನು ರದ್ದುಗೊಳಿಸುವಂತೆ ಕೇಳಿದೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನ್ಯದ ಎದುರು ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾದ ವರದಿಗಳು ಬಂದಿದ್ದರಿಂದ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿರುವ ತನ್ನ ಮಿತ್ರ ಪಕ್ಷ ಶಿವಸೇನೆಗೆ ಒತ್ತಾಯಿಸಿದೆ.

“ಗೌರವಾನ್ವಿತ ಮುಖ್ಯಮಂತ್ರಿಯವರೇ, ಈ ಒಪ್ಪಂದವನ್ನು ಆದಷ್ಟು ಬೇಗ ರದ್ದುಗೊಳಿಸಬೇಕು. ನಮ್ಮ ಸೈನಿಕರನ್ನು ಬಲಿ ಪಡೆದವರ ಬೊಕ್ಕಸವನ್ನು ನಾವು ಭರ್ತಿ ಮಾಡಲು ಸಾಧ್ಯವಿಲ್ಲ ” ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಟ್ವಿಟರ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಕೇಳಿದ್ದಾರೆ.

ಚೀನಾ ಮತ್ತು ಇತರ ದೇಶಗಳಿಂದ ಅನಿವಾರ್ಯವಲ್ಲದ ಆಮದನ್ನು ಕಡಿಮೆ ಮಾಡುವ ಮಾರ್ಗಗಳನ್ನೂ ಸರ್ಕಾರ ನೋಡುತ್ತಿದೆ ಮತ್ತು ಚೀನಾದ ಕಂಪನಿಗಳಿಗೆ ನೀಡಿದ್ದ ಕೆಲವು ಯೋಜನೆಗಳನ್ನು ಸಹ ಈಗಾಗಲೇ ಸರಕಾರ ರದ್ದುಗೊಳಿಸಿದೆ.

LEAVE A REPLY

Please enter your comment!
Please enter your name here