ಗ್ರಾಪಂ ಚುನಾವಣೆ : ಪತಿ ವಿರುದ್ಧ ಕಣಕ್ಕಿಳಿದ ಪತ್ನಿ| ಯೋಚಿಸಿಯೇ ನಿರ್ಧಾರ ಎಂದ ದಂಪತಿ!

0
159
Tap to know MORE!

ಸುಂಟಿಕೊಪ್ಪ ಡಿ.17: ಕೊಡಗಿನ ಸೋಮವಾರಪೇಟೆ ತಾಲೂಕು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಚುನಾವಣಾ ಕಣದಲ್ಲಿ ಪತಿ-ಪತ್ನಿ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ತೊಂಡೂರು ನಿವಾಸಿಗಳಾದ ಕಿಶೋರ್‌ ಮತ್ತು ಶ್ರೀಜಾ ದಂಪತಿ ಏಳನೇ ಹೊಸಕೋಟೆಯ 2ನೇ ವಾರ್ಡಿನಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಗಳಾಗಿ ಪರಸ್ಪರ ನೇರ ಹೋರಾಟಕ್ಕೆ ನಿಂತಿದ್ದಾರೆ.

ರಾಜಕೀಯ ಪಕ್ಷಗಳ ಬೆಂಬಲಿತರು ಮತ್ತು ಇತರ ಸ್ವತಂತ್ರ ಅಭ್ಯರ್ಥಿಗಳ ನಡುವೆ ಗೆಲುವಿಗೆ ಪೈಪೋಟಿ ನಡೆಸುತ್ತಿದ್ದಾರೆ. ಏಳನೇ ಹೊಸಕೋಟೆಯ ಒಂದನೇ ವಾರ್ಡಿನಲ್ಲೂ ಕಿಶೋರ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಪತ್ನಿ ವಿರುದ್ಧ 2ನೇ ವಾರ್ಡಿನಲ್ಲಿಯೂ ಸ್ಪರ್ಧೆ ಹಿನ್ನೆಲೆ ಕಣದಲ್ಲಿದ್ದು, ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: SURVEY: ದೇಶದ ಶೇ.60ರಷ್ಟು ಮಹಿಳೆಯರು ಇದುವರೆಗೆ ಇಂಟರ್ನೆಟ್ ಬಳಕೆ ಮಾಡಿಲ್ಲ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಜಾ, ”ನಾನು ಮತ್ತು ನನ್ನ ಪತಿ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದು, ನನ್ನ ಪತಿ ಇದೇ ಊರಿನವರು, ನಾನು ಹೊರಗಿನಿಂದ ಬಂದವಳು. ನಾವು ಕೂಲಿ ಕಾರ್ಮಿಕರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯ ಅನುದಾನ ಸರಿಯಾದ ರೀತಿಯಲ್ಲಿ ಸರಿಯಾದ ಜನರಿಗೆ ತಲುಪುತ್ತಿಲ್ಲ”.

“ಇದರಿಂದ ನೊಂದು ನಾನು ಮತ್ತು ನನ್ನ ಪತಿ ಯೋಚಿಸಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದೇವೆ. ನನ್ನ ವಿರುದ್ಧವಾಗಿ ಪತಿ 2ನೇ ವಾರ್ಡಿನಲ್ಲಿ ಸ್ಪರ್ಧಾ ಕಣದಲ್ಲಿದ್ದಾರೆ. ನಾನು ಸ್ವ ಸಹಾಯ ಸಂಘದಲ್ಲಿ ಸಕ್ರಿಯವಾಗಿ ದುಡಿದ ಅನುಭವದಿಂದ ಮಹಿಳೆಯರು ಸೇರಿದಂತೆ ಎಲ್ಲರ ಸಹಕಾರ ನನಗಿದೆ,” ಎಂದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ಮತ ಯಾಚಿಸುವ ಸಂದರ್ಭ ನಾವು ಕೆಲವೆಡೆ ಜೊತೆಯಲ್ಲಿ ತೆರಳುತ್ತೇವೆ. ಇಬ್ಬರಲ್ಲಿ ಯಾರೂ ಗೆದ್ದರೂ ಒಬ್ಬರಿಗೊಬ್ಬರು ಸಹಕರಿಸುವುದು ಅನಿವಾರ್ಯ. ಪತಿ ಅವರ ಗೆಳೆಯರು, ಆಪ್ತರು ಏಳನೇ ಹೊಸಕೋಟೆ-2ನೇ ವಾರ್ಡಿನಲ್ಲಿ ನಾಮಪತ್ರವನ್ನು ವಾಪಸ್‌ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆದರೆ ನಾನು ನಿರಾಕರಿಸಿದೆ,”ಎಂದು ಶ್ರೀಜಾ ತಿಳಿಸಿದರು.

ಜೂಜಾಟದಲ್ಲಿ ಪತ್ನಿಯನ್ನೇ ಅಡವಿಟ್ಟು ಸೋತ ಪತಿ | ಬಳಿಕ ಆಕೆಯ ಮೇಲೆ ಆ್ಯಸಿಡ್ ದಾಳಿ!

LEAVE A REPLY

Please enter your comment!
Please enter your name here