ಆನ್ಲೈನ್ ಚೆಸ್ ಒಲಿಂಪಿಯಾಡ್ – ಭಾರತ ಮತ್ತು ರಷ್ಯಾವನ್ನು ಜಂಟಿ ಚಾಂಪಿಯನ್ ಎಂದು ಘೋಷಣೆ

0
225
Tap to know MORE!

ಇಂದು ನಾಟಕೀಯ ಅಂತ್ಯ ಪಡೆದಿದ್ದ ಚೆಸ್ ಒಲಿಂಪಿಯಾಡ್‌ ಫೈನಲ್‌ ಪಂದ್ಯದ ಫಲಿತಾಂಶವು ಪ್ರಕಟಗೊಂಡಿದ್ದು, ಭಾರತ ಹಾಗೂ ರಷ್ಯಾವನ್ನು ಜಂಟಿ ಚಾಂಪಿಯನ್‌ಗಳೆಂದು ಘೋಷಿಸಲಾಗಿದೆ.

ಭಾರತ ಮತ್ತು ರಷ್ಯಾ ನಡುವಿನ ಪಂದ್ಯಾಟದಲ್ಲಿ, ಭಾರತ ಆಟಗಾರರು ಸರ್ವರ್‌ನೊಂದಿಗೆ ತಮ್ಮ ಸಂಪರ್ಕವನ್ನು ಕಳೆದುಕೊಂಡಿದ್ದರು. ಇದರ ಪರಿಣಾಮ, ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರಿಂದ ರಷ್ಯಾವನ್ನು ವಿಜಯೀ ಎಂದು ಘೋಷಿಸಲಾಗಿತ್ತು. ಆದರೆ ಭಾರತವು ಈ ಕುರಿತು ಮೇಲ್ಮನವಿ ಸಲ್ಲಿಸಿದ್ದರಿಂದ ಫಲಿತಾಂಶವನ್ನು ಮರು ಪರಿಶೀಲಿಸಲಾಯಿತು. ಬಳಿಕ, ಎರಡೂ ತಂಡಗಳನ್ನು ಚಾಂಪಿಯನ್ ಎಂದು ಘೋಷಿಸಲಾಯಿತು.

ಕ್ಯಾಪ್ಟನ್ ವಿದಿತ್ ಗುಜರಾತಿ, ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಕೊನೆರು ಹಂಪಿ, ಡಿ ಹರಿಕಾ, ಯುವ ಆಟಗಾರ ಆರ್ ಪ್ರಜ್ಞಾನಂದ, ಪೆಂಟಾಲಾ ಹರಿಕೃಷ್ಣ ಮತ್ತು ದಿವ್ಯಾ ದೇಶ್ಮುಖ್ ಕೂಡಿರುವ ತಂಡವು ಭಾರತವನ್ನು ಪ್ರತಿನಿಧಿಸಿತ್ತು. ಚೆಸ್ ಒಲಿಂಪಿಯಾಡ್‌ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ಭಾರತ, ಕೂಟದಲ್ಲಿ ನಾಟಕೀಯ ಅಂತ್ಯವನ್ನು ಪಡೆಯಿತು.

ಪಂದ್ಯದಲ್ಲಿ ನಿಹಾಲ್ ಸರಿನ್ ಮತ್ತು ದಿವ್ಯಾ ದೇಶಮುಖ್ ಅವರು ಸರ್ವರ್‌ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದರಿಂದ ನಿಯೋಜಿತ ಸಮಯವೂ ಮುಕ್ತಾಯಗೊಳ್ಳುತ್ತದೆ. ವಿವಾದಾತ್ಮಕ ಮುಕ್ತಾಯ ಕಂಡಿದ್ದರಿಂದ, ಭಾರತವು ಫಲಿತಾಂಶವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿತ್ತು.

ಇದರಿಂದಾಗಿ, ಭಾರತವು ಮೊದಲ ಬಾರಿಗೆ ಆನ್ಲೈನ್ ಚೆಸ್ ಒಲಿಂಪಿಯಾಡ್ ನಲ್ಲಿ ಚಾಂಪಿಯನ್ ಪಟ್ಟ ಪಡೆಯಿತು.

LEAVE A REPLY

Please enter your comment!
Please enter your name here