ನವದೆಹಲಿ, ಅ 26: ಪುರುಷ ಕೇಂದ್ರ ಸರ್ಕಾರಿ ನೌಕರರಿಗೂ ಇನ್ನು ಮುಂದೆ ಚೈಲ್ಡ್ ಕೇರ್ ಲೀವ್ ಸಿಗಲಿದೆ. ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ರಜೆ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಸರ್ಕಾರಿ ಸೇವೆಯಲ್ಲಿರುವ ವಿಧವೆ, ವಿಚ್ಛೇದಿತ, ಅವಿವಾಹಿತ ಪುರುಷರು, ತಮ್ಮ ಮಕ್ಕಳು 18 ವರ್ಷ ತಲುಪುವವರೆಗೆ 730 ದಿನಗಳ ಮಕ್ಕಳ ಆರೈಕೆ ರಜೆ ಪಡೆಯಲು ಅರ್ಹರಾಗಿದ್ದಾರೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. “ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಯೂ ಸಹ ಪತ್ನಿಯಷ್ಟೇ ಜವಾಬ್ದಾರಿ ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.
“ಸಿಂಗಲ್ ಪೇರೆಂಟ್ ಆಗಿರುವ ಪುರುಷ ಸರ್ಕಾರಿ ನೌಕರರಿಗೂ ಮಕ್ಕಳ ಪಾಲನೆ ಪೋಷಣೆಗೆ ರಜೆ ನೀಡಲು ನಿರ್ಧರಿಸಲಾಗಿದೆ. ವಿಚ್ಚೇಧನ ಪಡೆದವರು, ಪತ್ನಿ ಮೃತಪಟ್ಟವರು ಈ ರಜೆಯ ಉಪಯೋಗ ಪಡೆದುಕೊಳ್ಳಬಹುದು” ಎಂದು ಸಚಿವರು ಹೇಳಿದ್ದಾರೆ.