ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅನ್ವೇಷಣಾ ಸಂಘದ ವತಿಯಿಂದ ಸಸ್ಯ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರವರ ಜನ್ಮದಿನಾಚರಣೆಯನ್ನು ವೆಬಿನಾರ್ ಮುಖಾಂತರ ಸೋಮವಾರ ಆಚರಿಸಲಾಯಿತು.
ಪ್ರಥಮ ಬಿ ಎಸ್ಸಿ ವಿದ್ಯಾರ್ಥಿ ಶ್ರೇಯಸ್ ಭೌತವಿಜ್ಞಾನಿ ಹಾಗು ಸಸ್ಯ ವಿಜ್ಞಾನಿ ಸರ್ ಜೆ ಸಿ ಬೋಸ್ ರವರ ಜೀವನಗಾಥೆಯನ್ನು ಪರಿಚಯಿಸಿ, ಸಸ್ಯಗಳೂ ಸಹ ಸಂವೇದನಶೀಲತೆವುಳ್ಳ ಜೀವಿಗಳು ಎಂಬುದನ್ನು ತಾನೇ ಸೃಷ್ಟಿಸಿದ ಕ್ರೆಸ್ಕೋಗ್ರಾಫ್ ಮೂಲಕ ತೋರಿಸಿಕೊಟ್ಟರು. ಅಕ್ಷತಾ, ಅನುಷಾ, ದೀಪ್ತಿ ಮತ್ತು ಮೆಲ್ರಿನ್ ಡಿಸೋಜ, ಮಾರ್ಕೋನಿಗಿಂತ ಮೊದಲೇ ರೇಡಿಯೋ ತರಂಗಾಂತರದ ಮೇಲೆ ಸಂಶೋಧನೆ ಮಾಡುತ್ತಿದ್ದ ಬೋಸ್ ವೈರ್ಲೆಸ್ ದೂರಸಂಪರ್ಕದ ಪಿತಾಮಹ, ಎಂದು ವಿವರಿಸಿದರು.
ಇದನ್ನೂ ಓದಿ: ಮಂಗಳೂರು : ವಿವಿ ಕಾಲೇಜಿನಲ್ಲಿ “ಸಂವಿಧಾನ ದಿನ” ಆಚರಣೆ
ಸರಣಿ ಕಾರ್ಯಕ್ರಮಗಳ ಉದ್ದೇಶ ವಿವರಿಸಿದ ಅನ್ವೇಷಣಾ ಸಂಘದ ಸಹ ನಿರ್ದೇಶಕರಾದ ಡಾ. ಸಿದ್ದರಾಜು ಎಂ ಎನ್, ಯುವ ಪೀಳಿಗೆಗೆ ಅತಿ ಕಡಿಮೆ ಸೌಲಭ್ಯಗಳ ನಡುವೆ ಜಗತ್ತೇ ಹುಬ್ಬೇರಿಸುವಂತಹ ಸಂಶೋಧನೆ ನಡೆಸಿದ ನಮ್ಮ ಭಾರತೀಯ ವಿಜ್ಞಾನಿಗಳ ಪರಿಚಯ ಮಾಡಿಸಲಾಗುತ್ತಿದೆ, ಎಂದರು. ಭಾರತದ ಪ್ರಥಮ ಸೈನ್ಸ್ ಫಿಕ್ಷನ್ ಕತೆ “ದಿ ರನ್ಅವೇ ಸೈಕ್ಲೋನ್ ” ಮೂಲಕ ಆ ಕಾಲದಲ್ಲೇ ಬಟರ್ ಫ್ಲೈ ಎಫೆಕ್ಟ್ ಎಂದರೇನು ಎಂಬುದನ್ನು ಒಂದು ಕಾಲ್ಪನಿಕ ಕತೆಯಲ್ಲಿ ವಿವರಿಸಿರುವ ಬೋಸ್ ರವರು ಅಸಾಮಾನ್ಯ ಪ್ರತಿಭಾವಂತ, ಎಂದು ಅವರು ಪುನರುಚ್ಚರಿಸಿದರು.
ಸುದ್ದಿಗಳನ್ನು ವಾಟ್ಸಾಪ್ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ
ಪಲ್ಲವಿ ಪ್ರಾರ್ಥಿಸಿದರೆ, ಮೆಲ್ರಿನ್ ಸ್ವಾಗತಿಸಿದರು. ವೇದಾಶಿನಿ ವಂದನಾರ್ಪಣೆ ಮಾಡಿದರು. ಸಂಘದ ಹಿರಿಯ ವಿದ್ಯಾರ್ಥಿ ಸಲೋನಿ ಸಮಾರಂಭ ನಿರ್ವಹಿಸಿದರು.