ಜನಸಂಖ್ಯೆ ನಿಯಂತ್ರಿಸಲು ವಿವಾಹವನ್ನೇ ನಿಷೇಧಿಸಬೇಕು: ಉತ್ತರ ಪ್ರದೇಶ ಸಂಸದ

0
138
Tap to know MORE!

ಸಂಭಾಲ್‌: ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ‘ಜನಸಂಖ್ಯಾ ನಿಯಂತ್ರಣ ಮಸೂದೆ‘, ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಬಿಜೆಪಿಯ ಚುನಾವಣಾ ಪ್ರಚಾರದ ಭಾಗವಾಗಿದೆ‘ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಸಂಸದ ಶಾಫೀಕ್‌ ಉರ್‌ ರೆಹಮಾನ್‌ ಬಾರಕ್‌, ‘ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದರೆ, ರಾಜ್ಯ ಸರ್ಕಾರ ವಿವಾಹಗಳನ್ನೇ ನಿಷೇಧಿಸಬೇಕು‘ ಎಂದು ವ್ಯಂಗ್ಯವಾಡಿದ್ದಾರೆ.

‘ಜನಸಂಖ್ಯೆ ನಿಯಂತ್ರಿಸಲು ವಿವಾಹ ನಿಷೇಧಿಸುವುದೇ ಉತ್ತಮ. ಮುಂದಿನ 20 ವರ್ಷಗಳವರೆಗೆ ಯಾರೂ ಮದುವೆಯಾಗಬಾರದು ಎಂದು ಕಾನೂನು ತಂದರಾಯಿತು. ಆಗ ಮಕ್ಕಳ ಜನನದ ವಿಚಾರವೇ ಬರುವುದಿಲ್ಲವಲ್ಲ‘ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಸರ್ಕಾರದ ಜನಸಂಖ್ಯಾ ನೀತಿಯನ್ನು ಟೀಕಿಸಿದ್ದಾರೆ.

ಕೋವಿಡ್ 19: ಉತ್ತರಪ್ರದೇಶ ಮಾದರಿಯನ್ನು ಶ್ಲಾಘಿಸಿದ ಆಸ್ಟ್ರೇಲಿಯಾ ಸಂಸತ್ ಸದಸ್ಯ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

‘ಇದೆಲ್ಲ ಬಿಜೆಪಿಯವರು ಚುನಾವಣೆ ಪ್ರಚಾರಕ್ಕಾಗಿ ಜಾರಿಗೆ ತಂದಿರುವ ಮಸೂದೆ. ಅವರು ಎಲ್ಲ ವಿಚಾರವನ್ನೂ ರಾಜಕೀಯ ದೃಷ್ಟಿಯಿಂದಲೇ ನೋಡುತ್ತಾರೆ. ಆ ಪಕ್ಷದವರು ಕೈಗೊಳ್ಳುವ ನಿರ್ಧಾರಗಳು ಚುನಾವಣೆ ಗೆಲ್ಲುವ ಉದ್ದೇಶವನ್ನು ಹೊಂದಿರುತ್ತವೆಯೇ ಹೊರತು ಜನರ ಹಿತವನ್ನು ಒಳಗೊಂಡಿರುವುದಿಲ್ಲ‘ ಎಂದು ಆರೋಪಿಸಿದ್ದಾರೆ.

‘ಈಗ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಅವರ ಎಲ್ಲ ನಿರ್ಧಾರಗಳು ಚುನಾವಣಾ ಕೇಂದ್ರೀಕೃತವಾಗಿರುತ್ತವೆ. ಅಲ್ಲಾಹ್‌ನ ಆಶೀರ್ವಾದದಿಂದ, ಅವರು ಚುನಾವಣೆಯಲ್ಲಿ ಗೆಲ್ಲಲು ನಾವು ಬಿಡುವುದಿಲ್ಲ‘ ಎಂದು ಬಾರಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here