ಮಂಗಳೂರು: ಉಪಚುನಾವಣೆಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ಗೆ ಗೆಲುವು ನಿಶ್ಚಿತ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಬಲಿಷ್ಠಗೊಂಡಿದೆ. ಶಿವಕುಮಾರ್ ಬಂದ ಬಳಿಕ ಪಕ್ಷದಲ್ಲಿ ಬದಲಾವಣೆ, ವೇಗ ಕಾಣಿಸುತ್ತಿದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಗೆಲುವು ಸಾಧಿಸದೇ ಡಿಕೆ ಶಿವಕುಮಾರ್ ಸೋದರರು ವಿರಮಿಸಲ್ಲ. ಚುನಾವಣೆಗೆ ಖರ್ಚು ಮಾಡಲು ಸಾಧ್ಯವಿರುವ ವ್ಯಕ್ತಿ ಅಂದ್ರೆ ಡಿಕೆಶಿ. ಖರ್ಚು ಮಾಡುವಷ್ಟು ಹಣ ಡಿಕೆಶಿ ಅವರಲ್ಲಿದೆ. ಗೆಲುವು ಸಿಗುವವರೆಗೆ ಅವರು ನಿದ್ದೆ ಮಾಡಲ್ಲ. ಅವರೊಂದಿಗೆ ಡಿಕೆ ಸುರೇಶ್ ಹಾಗೂ ಅವರ ತಾಯಿ ಕೂಡ ನಿದ್ದೆ ಮಾಡಲ್ಲ ಅಂದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ರೆ ಡಿಕೆಶಿ ಸಿಎಂ ಆಗ್ತಾರೆ ಎಂದು ಅವರ ಬೆಂಬಲಿಗರು ಹೇಳ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯರ ವಿರೋಧ ಇದೆ. ಅದಕ್ಕೆ ಸಿದ್ದರಾಮಯ್ಯ ಆಸ್ಪದ ಕೊಡಲ್ಲ ಅನ್ನೋ ಮಾತಿದೆಯಲ್ಲಾ ಎಂದು ಮಾಧ್ಯಮದವ್ರು ಪೂಜಾರಿಯನ್ನ ಪ್ರಶ್ನಿಸಿದಾಗ “ಸಿದ್ದರಾಮಯ್ಯ ಎಷ್ಟೇ ಪ್ರಯತ್ನಿಸಿದರೂ ಡಿಕೆ ಶಿವಕುಮಾರ್ ಗೆಲುವು ಸಾಧಿಸುತ್ತಾರೆ. ಯಾವ ಭಯವೂ ನಮಗಿಲ್ಲ , ಗೆಲುವು ನಮ್ಮದೇ” ಎಂದು ಜನಾರ್ಧನ ಪೂಜಾರಿ ಹೇಳಿದ್ದಾರೆ.