ತನ್ನ ಹುದ್ದೆಗೆ ರಾಜಿನಾಮೆ ನೀಡಿದ ಜಪಾನ್‌ ಪ್ರಧಾನಿ!

0
216
ಜಪಾನ್‌ ಪ್ರಧಾನಿ, ಶಿಂಜೊ ಅಬೆ
Tap to know MORE!

ಜಪಾನ್ ದೇಶದ ಪ್ರಧಾನಿ ಶಿಂಜೊ ಅಬೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

“ನಾನು ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. ಅವರು ಅಲ್ಸರೇಟಿವ್ ಕೊಲೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಹಲವಾರು ವರ್ಷಗಳಿಂದ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.

ಇತ್ತೀಚೆಗೆ ಎರಡು ಬಾರಿ ವೈದ್ಯಕೀಯ ತಪಾಸಣೆ ನಡೆಸಿದ್ದ ಅಬೆ, ಆರೋಗ್ಯದ ಸಮಸ್ಯೆಯಿಂದಾಗಿ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು.

ಅಬೆ, 2012 ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದರು. ಅದಕ್ಕೂ ಮೊದಲು ಅವರು 2006 ರಿಂದ 2007 ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆಗ ಕೇವಲ ಒಂದೇ ವರ್ಷದಲ್ಲಿ ನಂತರ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲೂ ಸಹ ಅವರು ಆರೋಗ್ಯ ಕಾರಣಗಳನ್ನು ನೀಡಿದ್ದರು. ಅವರ ಕ್ಯಾಬಿನೆಟ್ನಲ್ಲಿ ನಡೆದ ಹಲವಾರು ಹಗರಣಗಳು ಮತ್ತು ಅವರ ಆಡಳಿತ ಪಕ್ಷಕ್ಕೆ ಎದುರಾದ ಚುನಾವಣಾ ಸೋಲಿನ ನಂತರ ಅವರ ರಾಜಿನಾಮೆ ಬಂದಿರುವುದು ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಕಳೆದ ಸೋಮವಾರವಷ್ಟೇ, ಅವರು ತಮ್ಮ ದೊಡ್ಡಪ್ಪ, ಇಸಾಕು ಸಾಟೊ ಅವರ ಹೆಸರಲ್ಲಿದ್ದ ಸುದೀರ್ಘ ಅವಧಿಯ ಆಡಳಿತದ ದಾಖಲೆಯನ್ನು ಇವರು ಮುರಿದಿದ್ದರು.

LEAVE A REPLY

Please enter your comment!
Please enter your name here